ಫಲಿಸಿದ ಪ್ರಾರ್ಥನೆ, ಪೊಲೀಸರ ಪ್ರಯತ್ನ: ಕುಶಾಲನಗರದ ವಿನೋದ್ ಪತ್ತೆ
ಕುಶಾಲನಗರ, ಜು.13: ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದ ಕುಶಾಲನಗರದ ಡಾ. ಸಿದ್ದಯ್ಯ ಪುರಾಣಿಕ ಬಡಾವಣೆಯ ವಿನೋದ್ ರನ್ನು ಕಡೆಗೂ ಪೊಲೀಸರು ಧಾರವಾಡದಲ್ಲಿ ಪತ್ತೆ ಹಚ್ಚಿ ಕರೆ ತಂದಿದ್ದಾರೆ.
ತಾ.8ರಂದು ಬೆಳಿಗ್ಗೆ ಕುಶಾಲನಗರ ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಮತ್ತು ಗ್ರಾಮಾಂತರ ಇನ್ಸ್ಪೆಕ್ಟರ್ ದಿನೇಶ್ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ದೀಪಕ್ ಹಾಗೂ ಮಂಜುನಾಥ್ ಸಮಯೋಚಿತ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ವಿನೋದ್ ರನ್ನು ಕುಶಾಲನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ಕಡೆಗೂ ಈ ಜಟಿಲ, ನಿಗೂಢ ನಾಪತ್ತೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕೊಡಗು ಜಿಲ್ಲಾ ಮತ್ತು ಕುಶಾಲನಗರ ಪೊಲೀಸರಿಗೆ ವಿನೋದ್ ರ ತಾಯಿ ಹಾಗೂ ಸಹೋದರ ಭರತ್ ಕೃತಜ್ಞತೆ ತಿಳಿಸಿದ್ದಾರೆ.
ವರದಿ: ಶ್ರೀಧರ್ ನಾರಾಯಣ್
What's Your Reaction?
Like
4
Dislike
0
Love
1
Funny
0
Angry
1
Sad
2
Wow
1

