ಕೋಯಿಕೋಡು ಏರ್ಪೋಟ್ ನಲ್ಲಿ ಚಿನ್ನ ದರೋಡೆ ಯತ್ನ:ವಿರಾಜಪೇಟೆಯ ಯುವಕನ ಬಂಧನ
ವೀರಾಜಪೇಟೆ,ಜೂ:08: ಶೀಘ್ರದಲ್ಲಿ ಹಣ ಮಾಡುವ ಉದ್ದೇಶದಿಂದ 13 ಮಂದಿ ಬಂಧನವಾದ ಘಟನೆ ಕೋಯಿಕೋಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಡೆದಿದೆ.
ವಿರಾಜಪೇಟೆ ನಗರದ ನೆಹರುನಗರದ ನಿವಾಸಿ ಕೇಬಲ್ ಕಾರ್ಮಿಕನಾಗಿದ್ದ ಅಭಿ ಪ್ರಾಯ 31 ವರ್ಷ ಸೇರಿದಂತೆ ಕಣ್ಣೂರು ಮತ್ತು ಕೋಯಿಕೋಡ್ ಜಿಲ್ಲೆಯ 10 ಮಂದಿ ಮಲಪುರಂ ಜಿಲ್ಲೆಯ 2 ಮಂದಿ ಬಂಧನವಾಗಿದ್ದಾರೆ.
ಬಂದಿತರಲ್ಲಿ ಕಣ್ಣೂರು ನಿವಾಸಿ ಕೆ.ಪಿ. ಜುನೈದ್,(27) ಕಾಕಯಂಗಾಡ್ ಮುಕ್ಕಕುನ್ನು ನಿವಾಸಿಗಳಾದ ವಿ.ಶರತ್ (35,) ಕೆ.ಕೆ. ಕನಕರಾಜ್ (28), ಕೆ.ಕೆ. ಅಕ್ಷಯ್,(26), ಕೆ.ಧನಿಶ್ (29), ತಿಲ್ಲಂಗೇರಿ ಮೂಲದ ಟಿ. ರಂಜಿತ್ (41) ಚಕ್ಕರ ಕಲ್ಲ್ ನಿವಾಸಿ ತಾಜುದ್ದೀನ್ (32), ವಾರಂ ಮೂಲದ ಶರೊಣ್ (23,) ಕೂತುಪರಂಬು ಕೆ.ಸ್ವರಲಾಲ್ (38), ತಿರೂರ್ ಪುದಿಯ ಕಡಪುರಂ ನಿವಾಸಿ ರೀಯಸ್ (29) ಬೇಪೂರ್ ನಿವಾಸಿ ಪಿ.ಸುಜೀತ್ (26) ಪಿ ವಾಲ್ ಸಂಜೀತ್ (26), ಮತ್ತು ಇರ್ಫಾನ್ (26) ಬಂಧಿತ ಆರೋಪಿಗಳು.
ಘಟನೆಯ ವಿವರ:
ಸೌದಿ ಅರೇಬಿಯಾ ದೇಶದಲ್ಲಿ ಕೆಲಸ ಮಾಡುತ್ತಿರುವ ಕಣ್ಣೂರು ಮೂಲದ ಕೈಪೆಕಂಡಿ ನಿವಾಸಿ ಅನ್ಸಾರ್ ಮತ್ತು ಪರಪ್ಪನಾಂಗಡಿ ಪುತ್ತನ್ ಕಡಪ್ಪುರಂ ನ ನಿವಾಸಿ ಆಲಿ ಅಕ್ಬರ್ ಅವರುಗಳ ನಿರ್ದೇಶನದ ಮೇರೆಗೆ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತಡೆದು ಚಿನ್ನ ನಗದು ಇತರ ವಸ್ತುಗಳನ್ನು ದರೋಡೆ ಮಾಡುವ ಸಂಚು ರೂಪಿಸಲಾಗಿತ್ತು. ದರೋಡೆ ಪ್ರಕರಣ, ಕೊಲೆ ಮತ್ತು ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಗಳಾಗಿದ್ದ ಯುವಕರನ್ನು ಗುರುತಿಸಿದ್ದ ಅನ್ಸಾರ್ ಮತ್ತು ಆಲಿ ಅಕ್ಬರ್ ಕೊಟೇಶನ್ ತಂಡ ಸುಪಾರಿ ಪಡೆದು ತಾವು ಮಾಡುವ ಕೃತ್ಯಗಳಿಗೆ ಯುವಕರನ್ನು ಸರರಾಜು ಮಾಡುತ್ತಿದ್ದರು ಎಂದು ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣದ ಪ್ರಮುಖ ರೂವಾರಿಗಳು ತಂಡದ 14 ಮಂದಿಗೆ ರವಿವಾರ ದಿನದಂದು ರಾತ್ರಿ ನೈನಿತ್ತಾಲ್ ನಿಂದ ಕೋಯಿಕೊಡ್ ಕರಿಪುರಂ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನದಲ್ಲಿ ಚಿನ್ನ ತರಲಾಗುತ್ತಿದ್ದು ಅದನ್ನು ದರೋಡೆ ಮಾಡುವ ಸಂಚು ರೂಪಿಸಿ ತಂಡ 13 ಮಂದಿ ಯುವಕರನ್ನು ಗೊತ್ತುಪಡಿಸಿತ್ತು. ಅಂದು ರಾತ್ರಿ ಸುಮಾರು 9.30 ವಿಮಾನ ನಿಲ್ದಾಣದ ಹೊರ ವಲಯದಲ್ಲಿ ತಂಡವು ಹೊಂಚು ಹಾಕಿ ಕುಳಿತಿತ್ತು. ಅನುಮಾನಸ್ಪಾದವಾಗಿ ಮಾತನಾಡುತ್ತಿದ್ದ ಯುವಕರನ್ನು ವಿಚಾರಿಸಲು ವಿಮಾನ ನಿಲ್ದಾಣದ ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಯುವಕರು ತದ್ವಿರುದ್ದ ಮಾಹಿತಿಗಳನ್ನು ನೀಡಿದ ಸಂಧರ್ಭ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬಂಧನದ ವೇಳೆಯಲ್ಲಿ ಯುವಕರು ಪ್ರಯಾಣಕರಿಂದ ಚಿನ್ನ ದರೋಡೆ ಮಾಡುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತನಿಖೆ ಸಂದರ್ಭ ಜಿದ್ದಾದಿಂದ ಪ್ರಯಾಣ ಬೆಳಸಿದ್ದ ಎನ್ನಲಾದ ವ್ಯಕ್ತಿಯೋರ್ವ ಕಾಣೆಯಾಗಿದ್ದು ಮೂವರು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ಬಂಧಿತ ಯುವಕರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳು ಎರಡು ದ್ವಕಚಕ್ರ ವಾಹನಗಳು ಸೇರದಂತೆ ಮೊಬೈಲುಗಳನ್ನು ವಶಕ್ಕೆ ಪಡೆದಿದ್ದಾರೆ.
ಮೊಬೈಲು ದೂರವಾಣಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಾಟ್ಸ್ ಅಪ್ ಸಂದೇಶ ಕರೆಗಳನ್ನು ಕಲೆಹಾಕಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಇದೀಗಾ ಬಂದನಕ್ಕೆ ಒಳಗಾಗಿರುವ ಯುವಕರ ತಂಡಕ್ಕೆ ಹಾಗೂ ಚಿನ್ನ ಕಳ್ಳಸಾಗಾಣೆ ಮಾಡುವ ತಂಡಕ್ಕೆ ಸಂಭಂದ ಇದೆ ಅಥಾವ ಇಲ್ಲ ಎಂಬುದು ಪೊಲೀಸುರ ತನಿಖೆಯಿಂದ ತಿಳಿದು ಬರಬೇಕಿದೆ.
ವರದಿ; ಕಿಶೋರ್ ಕುಮಾರ್ ಶೆಟ್ಟಿ ವಿರಾಜಪೇಟೆ

