ಅಮ್ಮತ್ತಿ: ಕಾರು-ಬೈಕ್ ಅಪಘಾತ! ಓರ್ವ ಮೃತ್ಯು!!! ಮತ್ತೊಬ್ಬ ಸವಾರ ಗಂಭೀರ

ಮಡಿಕೇರಿ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಅಮ್ಮತ್ತಿಯಲ್ಲಿ ರಾತ್ರಿ ಎಂಟು ಗಂಟೆಗೆ ನಡೆದಿದ್ದು,ಬೈಕ್ ಹಿಂಬದಿ ಸವಾರನ ಸ್ಥಿತಿ ಗಂಭೀರವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಅಮ್ಮತ್ತಿ ಸಮೀಪದ ಆನಂದಪುರದ ನಿವಾಸಿ ಡಾಲ್ಡನ್ ಮೃತಪಟ್ಟಿದ್ದು,ವಿಲ್ಲಿ ಎಂಬಾತನು ಗಂಭೀರ ಗಾಯಗೊಂಡಿದ್ದಾನೆ.ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾನೆ.
What's Your Reaction?






