Kodagu

ಕರಿಮೆಣಸು ಕೊಯ್ಲು ಮಾಡುತ್ತಿರುವ ವೇಳೆ ಗುಂಡೇಟು ತಗುಲಿ ಯುವಕ ಸಾವು

admincoorgdaily

ಸಚಿನ್

ಕೊಡ್ಲಿಪೇಟೆ:ಗುಂಡೇಟು ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಕೊಡ್ಲಿಪೇಟೆಯಲ್ಲಿ ನಡೆದಿದೆ.ಸಚಿನ್ (30) ಸಾವನ್ನಪ್ಪಿದ ದುರ್ದೈವಿ.

ಇಂದು ಸಂಜೆ ನಡೆದ ಘಟನೆ ನಡೆದಿದ್ದು ತೋಟದಲ್ಲಿ ಕರಿ ಮೆಣಸು ಕುಯ್ಯಲು ತೆರಳಿದ ಸಂದರ್ಭ ಘಟನೆ ನಡೆದಿದೆ. ಗಾಯಾಳುವನ್ನ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದು, ಸಾವಿನ ಕುರಿತು ಸಾರ್ವಜನಿಕರಿಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.