ಈ ರುಚಿಯಾದ ಸ್ವೀಟ್ ತಿಂದ್ರೆ ಮತ್ತೆ ತಿನ್ನಬೇಕು ಅನ್ನಿಸುತ್ತೆ! ರುಚಿಯಾದ ಸ್ವೀಟ್ ಮಾಡುವ ವಿಧಾನ ಗೊತ್ತೇ!!!

ಬೇಕಾಗುವ ಪದಾರ್ಥಗಳು...
ಹಾಲು,ತುಪ್ಪ ,ಮೈದಾ ಹಿಟ್ಟು ,ಬಾದಾಮಿ ,ಏಲಕ್ಕಿ ಪುಡಿ, ಸಕ್ಕರೆ ಪುಡಿ, ಪಿಸ್ತಾ,
ಮಾಡುವ ವಿಧಾನ:
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಿಸಿಯಾದಾಗ ಅದಕ್ಕೆ ಮೈದಾ ಹಿಟ್ಟು ಹಾಕಿಕೊಂಡು ಹುರಿದುಕೊಳ್ಳಿ. ಮೈದಾ ಹಿಟ್ಟು ಚೆನ್ನಾಗಿ ಹುರಿಯಬೇಕು. ಗರಿ ಗರಿಯಾಗಿ ಹಿಟ್ಟು ಬರಬೇಕು. 10 ನಿಮಿಷ ರೋಸ್ಟ್ ಮಾಡಿಕೊಂಡ ನಂತರ ಇದಕ್ಕೆ ಸಕ್ಕರೆ ಪುಡಿ ಹಾಕಿಕೊಳ್ಳಿ. ಹಾಗೆ ಏಲಕ್ಕಿ ಪುಡಿ ಸಹ ಹಾಕಿಕೊಳ್ಳಿ. ನಂತರ ಹಾಲು ಕೂಡ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಬೆಣ್ಣೆಯಂತಹ ಹದವಾಗಿ ಮೃದುವಾಗಿ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ನಂತರ ಒಂದು ಟಿಫಿನ್ ಬಾಕ್ಸ್‌ಗೆ ತುಪ್ಪ ಸವರಿಕೊಂಡು ಬಾಕ್ಸ್ ತಳದಲ್ಲಿ ಬಾದಾಮಿ ಪಿಸ್ತಾ ಪುಡಿ ಇಲ್ಲವೆ ಕತ್ತರಿಸಿಕೊಂಡು ಸಣ್ಣ ಸಣ್ಣ ಚೂರುಗಳ ಕೆಳಗೆ ಹಾಕಿಕೊಳ್ಳಿ. ನಂತರ ಬಾಣಲೆಯಲ್ಲಿನ ಮಿಶ್ರಣವನ್ನು ಈ ಟಿಫಿನ್ ಬಾಕ್ಸ್‌ಗೆ ಹಾಕಿ ಮೇಲಿಂದ ಚೆನ್ನಾಗಿ ಒತ್ತಿಕೊಳ್ಳಿ. ನಂತರ ತಣ್ಣಗಾಗಲು ಬಡಬೇಕು. ಒಂದು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಬಾಕ್ಸ್ ಇಡಿ. ಇಲ್ಲವೆ ಫ್ರಿಡ್ಜ್‌ನಲ್ಲಿ ಇಟ್ಟರೂ ನಡೆಯುತ್ತದೆ. ಅರ್ಧ ಗಂಟೆ ಇಟ್ಟು ಬಳಿಕ ಚಾಕುವಿನಿಂದ ಕತ್ತರಿಸಿಕೊಂಡು ತೆಗೆಯಬಹುದು, ಇಲ್ಲವೇ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸಿಹಿ ತಿಂಡಿ ಸಿದ್ಧವಾಗುತ್ತೆ. ನೀವು ಕೂಡ ಮಾಡಿ ನೋಡಿ. ಮನೆಯಲ್ಲಿ ಇದನ್ನು ಮಾಡಿದ್ರೆ ಮಕ್ಕಳಿಗೆ ಬಹಳ ಇಷ್ಟವಾಗುತ್ತೆ. ನೀವು ಸಹ ಮಾಡಿ ಸವಿದು ನೋಡಿ. ಹಾಗೆ ಒಂದಿಷ್ಟು ದಿನ ಇದನ್ನು ಸಂಗ್ರಹಿಸಿಟ್ಟು ಕೂಡ ಸವಿದು ನೋಡಿ.
(ಬರಹ: ಸುಧಾ ಮಣಿ)
Directions
