ದುಬೈ ದಸರಾ ಕಪ್ ಫುಟ್ಬಾಲ್: ಕೊಡಗು ತಂಡ ಚಾಂಪಿಯನ್
ದುಬೈ:ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ನಾಡ ಹಬ್ಬ ಅರಬ್ ನಾಡಿನಲ್ಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ದುಬೈ ದಸರಾ ಕ್ರೀಡೋತ್ಸವದ ಭಾಗವಾದ ಕರ್ನಾಟಕ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಅನಿವಾಸಿ ಕೊಡಗಿನ ಯುವಕರು ಗೆಲವು ಸಾಧಿಸಿ ಏಳನೇ ವರ್ಷದ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದ್ದಾರೆ.
ದುಬೈಯಲ್ಲಿರುವ ಎಥಿಸಲಾತ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪ್ರತಿಷ್ಠಿತ ದುಬೈ ದಸರಾ ಕಪ್ ಕಾಲ್ಚೆಂಡು ಫೈನಲ್ ಪಂದ್ಯದಲ್ಲಿ ಬಲಿಷ್ಠ ಉಳ್ಳಾಲ ಗಯ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಕೂರ್ಗ್ ಯುನೈಟೆಡ್ ಎಫ್ಸಿ ದುಬೈ ತಂಡವು ಮಣಿಸಿತು.ಕೊಡಗಿನ ತಂಡವನ್ನು ನಾಯಕನಾಗಿ ರಫೀಕಲಿ ಕುಂಜಿಲ ಅವರು ಮುನ್ನಡೆಸಿದರು.
ತಂಡದಲ್ಲಿ ಆಟಗಾರರಾಗಿ ಆಸಿಫ್ ಕುಂಜಿಲ, ಅಫ್ರೀದ್ ಹೊಸಕೋಟೆ, ಜಾಫರ್ ಕಡಂಗ, ಆರಿಫ್ ಕುಂಜಿಲ, ಅಫ್ರಿದ್ ಸುಂಟಿಕೊಪ್ಪ, ತಬಶೀರ್ ಕುಂಜಿಲ, ರಾಝಿಕ್ ಸುಂಟಿಕೊಪ್ಪ, ಶುಹೈಬ್ ಕೊಟ್ಟಮುಡಿ ಇದ್ದರು. ಶಂಸಿ ಚಾಮಿಯಾಲ ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದರು.