ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ:ಪ್ರಜ್ವಲ್ ಶೆಟ್ಟಿ ಮತ್ತು ಸೃಜನ್ ಜೋಡಿ ಚಾಂಪಿಯನ್
ದುಬೈ: ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ಕ್ಲಬ್ ವತಿಯಿಂದ ದುಬೈನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು.
ಪಂದ್ಯಾವಳಿಯಲ್ಲಿ ಪ್ರಜ್ವಲ್ ಶೆಟ್ಟಿ ಮತ್ತು ಸೃಜನ್ ಶೆಟ್ಟಿ ಜೋಡಿ ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದರು.ಇಲ್ಲಿಯಾಸ್ ಮತ್ತು ತೌಸಿಫ್ ರನ್ನರ್-ಅಪ್ ಪ್ರಶಸ್ತಿ ಪಡೆದರು. ಅಶ್ಫಾಕ್ ಮತ್ತು ನಯೀಮ್, ಹಾಗೂ ಮಹೀನ್ ಮತ್ತು ಅಜ್ಮಲ್ ಜೋಡಿ ಸೆಮಿಫೈನಲ್ ಹಂತ ತಲುಪಿ ವಿರೋಜಿತ ಸೋಲು ಕಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಮಿದ್ಲಾಜ್ ಮತ್ತು ನೆರವೇರಿಸಿದರು. ತೀರ್ಪುಗಾರರಾಗಿ ಜುಬೈರ್ ಚೋಕಂಡಳ್ಳಿ ಮತ್ತು ನುಸ್ರತ್ ಕಾರ್ಯನಿರ್ವಹಿಸಿ್ರು. ವೀಡಿಯೊ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ನೌಷಿನಾ ನಿಸಾರ್ ಮತ್ತು ನಿಯಾಜ್ ನಿರ್ವಹಿಸಿದರು.