ಅಮೇರಿಕಾ:ಎನ್.ಸಿ.ಎಸ್.ಎಲ್ ಸಮಾವೇಶದಲ್ಲಿ ಭಾಗಿಯದ ವಿಧಾನಪರಿಷತ್ ಸದಸ್ಯ ಎಂಪಿ ಸುಜಾಕುಶಾಲಪ್ಪ

ಅಮೇರಿಕಾ:ಎನ್.ಸಿ.ಎಸ್.ಎಲ್ ಸಮಾವೇಶದಲ್ಲಿ ಭಾಗಿಯದ ವಿಧಾನಪರಿಷತ್ ಸದಸ್ಯ ಎಂಪಿ  ಸುಜಾಕುಶಾಲಪ್ಪ

ಅಮೇರಿಕಾ:ಅಮೇರಿಕಾದ ಬೋಸ್ಟನ್ ನಲ್ಲಿ ನಡೆಯುತ್ತಿರುವ ಎನ್.ಸಿ.ಎಸ್ಎ‌ಲ್ ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಭಾರತದಾದ್ಯಂತಲಿನ ವಿವಿಧ ರಾಜ್ಯಗಳ ವಿಧಾನಪರಿಷತ್ ಮತ್ತು ವಿಧಾನಸಭೆಗಳ 130 ಶಾಸಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಕನಾ೯ಟಕದ ವಿಧಾನಸಭೆಯಿಂದ ಸ್ಪೀಕರ್ ಸೇರಿ 12 ಮತ್ತು ವಿಧಾನಪರಿಷತ್ ನಿಂದ ಸಭಾಪತಿ, ಉಪಸಭಾಪತಿ ಸೇರಿ 10 ಸದಸ್ಯರು ಭಾಗಿಯಾಗಿದ್ದಾರೆ. ವಿಶ್ವದ ವಿವಿಧೆಡೆಗಳ ರಾಜಕೀಯ ಮುತ್ಸದಿಗಳು, ರಾಜಕೀಯ ಪ್ರಮುಖರು, ಅಧಿಕಾರಿಗಳನ್ನು ಭೇಟಿಯಾಗುವ ಅವಕಾಶ ದೊರೆತಿದ್ದು, ಮೂಲಸೌಲಭ್ಯ, ಪ್ರಗತಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಸಂಬಂಧಿತ ಚಚೆ೯ ನಡೆಸಲಾಗಿದೆ.