ನಾಳೆ ಜಿಲ್ಲೆಗೆ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
admincoorgdaily

ಮಡಿಕೇರಿ, ಫೆ. 11: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. ನಗರದ ಹೊರವಲಯದ ಕರ್ಣಂಗೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ರೆಸಾರ್ಟ್‌ವೊಂದರ ಉದ್ಘಾಟನೆಗೆ ಇವರು ಆಗಮಿಸುತ್ತಿರುವುದು ದೃಢಪಟ್ಟಿದ್ದು, ಸೂಕ್ತ ಭದ್ರತೆ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಬಂದಿದೆ.
ತಾ. 14 ರಂದು ಜಿಲ್ಲೆಗೆ ಬರಲಿರುವ ವೆಂಕಯ್ಯ ನಾಯ್ಡು ಅವರು, ತಾ. 15 ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳಲಿದ್ದಾರೆ. ಇವರೊಂದಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ತಾರಾ ಗಣ್ಯರು ಆಗಮಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.