ಪಶ್ಚಿಮ ಬಂಗಾಲದ ಮಾದರಿ ಅನುಸರಿಸಿ ಕನಾ೯ಟಕದಲ್ಲಿಯೂ ಬಿಜೆಪಿಗೆ ಗೆಲುವು;ಯದುವೀರ್ ವಿಶ್ವಾಸ

May 5, 2026 - 17:26
May 5, 2026 - 17:29
 0  206
ಪಶ್ಚಿಮ ಬಂಗಾಲದ ಮಾದರಿ  ಅನುಸರಿಸಿ  ಕನಾ೯ಟಕದಲ್ಲಿಯೂ ಬಿಜೆಪಿಗೆ ಗೆಲುವು;ಯದುವೀರ್ ವಿಶ್ವಾಸ

ಮಡಿಕೇರಿ ಮೇ 5: ಪಶ್ಚಿಮಬಂಗಾಲದಲ್ಲಿ ಬಿಜೆಪಿ ಸಾಧಿಸಿದ ಅಧ್ಬುತ ಗೆಲುವಿನ ಕಾಯ೯ತಂತ್ರವನ್ನೇ ಕನಾ೯ಟಕದಲ್ಲಿ 2028 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಳಸಿಕೊಂಡು ಈ ರಾಜ್ಯದಲ್ಲಿಯೂ ಗೆಲವು ಸಾಧಿಸಲಾಗುತ್ತದೆ ಎಂದು ಕೊಡಗು - ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.

ಮಾದಾಪುರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಯದುವೀರ್, ಪಶ್ಚಿಮಬಂಗಾಲದ ಗೆಲವು ಬಿಜೆಪಿಯಲ್ಲಿ ಮತ್ತೆ ಹೊಸ ಸಂಭ್ರಮ, ಉತ್ಹಾಸ ಮೂಡಿಸಿದೆ. 2028 ರಲ್ಲಿ ಕನಾ೯ಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಂಗಾಲದ ಮಾದರಿಯನ್ನು ಅನುಸರಿಸಿ ಬಿಜೆಪಿ ಕಾಯ೯ಕತ೯ರ ಪಡೆಯೊಂದಿಗೆ ಮತದಾರರ ಮನೆಮನ ತಲುಪಲಿದೆ. ಈ ಮೂಲಕ ಜನವಿರೋಧಿ ಕಾಂಗ್ರೆಸ್ ಸಕಾ೯ರದ ಅಂತ್ಯವಾಗಲಿದೆ ಎಂದೂ ಯದುವೀರ್ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0