ಉಷ್ಣಾಘಾತ (ಹೀಟ್ ಸ್ಟ್ರೋಕ್) ಹೆಚ್ಚುತ್ತಿದೆ ಜಾಗೃತರಾಗೋಣ

ಉಷ್ಣಾಘಾತ (ಹೀಟ್ ಸ್ಟ್ರೋಕ್) ಹೆಚ್ಚುತ್ತಿದೆ ಜಾಗೃತರಾಗೋಣ

ದೇಹದ ನೀರನ್ನು ಹೆಚ್ಚಿಸಿ ಶಾಖದಿಂದ ದೇಹದಲ್ಲಿ ನೀರು ವೇಗವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದಿರಿ. ಇಲ್ಲದಿದ್ದರೆ ಉಷ್ಣತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಪರಿಹಾರ---

1) ನಿತ್ಯ ಪ್ರಾಣಾಯಾಮ ಮಾಡಿ. ಇದು ಉಷ್ಣತೆಯೆ ತೀವ್ರತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡುತ್ತದೆ.* *2) ಅನುಲೋಮ ವಿಲೋಮ ಪ್ರಾಣಾಯಾಮ ಹೆಚ್ಚಾಗಿ ಮಾಡಿ. ದೇಹದ ಉಷ್ಣತೆಯು ಸ್ಥಿರವಾಗಿರುತ್ತದೆ.* *3) ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡ ಮೂಗಿನ ಹೊಳ್ಳೆಯನ್ನು ಹೆಚ್ಚು ಹೊತ್ತು ತೆರೆದಿಡಿ. ಏಕೆಂದರೆ ಅದು ಚಂದ್ರನಾಡಿ. ಇದರಿಂದ ದೇಹದ ತಾಪಮಾನ ಕುಗ್ಗುತ್ತದೆ.

 *4) ದೀರ್ಘಕಾಲ ಬಲಭಾಗದಲ್ಲಿ ಮಲಗಿ. ಇದರಿಂದ ಎಡ ಮೂಗಿನ ಹೊಳ್ಳೆ ಹೆಚ್ಚು ತೆರವಾಗುತ್ತದೆ.5) ಲಘು ಆಹಾರ ಸೇವಿಸಿ. ಹೊಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಪಿತ್ತವನ್ನು ಹೆಚ್ಚಿಸಬೇಡಿ.* *6) ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ತಣ್ಣೀರೇ ಬೇಕೆನಿಸಿದರೆ ಮಡಕೆಯ ನೀರನ್ನು ನಿಧಾನವಾಗಿ ಕುಡಿಯಿರಿ. ಗಟಗಟನೆ ಒಂದೇ ಉಸಿರಿನಲ್ಲಿ ನುಂಗಬೇಡಿ* *7) ಪಾನೀಯಗಳಲ್ಲಿ ಹಿಮಗಡ್ಡೆ ಬಳಸಬೇಡಿ. ಹಿಮಗಡ್ಡೆ ಉಷ್ಣತೆಯನ್ನು ಹೆಚ್ಚಿಸುತ್ತದೆ* *8) ಆಮ್ಲಾ / ಕೋಕಮ್ / ನಿಂಬೆ / ಮಜ್ಜಿಗೆ / ಇತ್ಯಾದಿಗಳನ್ನು ಹೆಚ್ಚಾಗಿ ಬಳಸಿ* *9) ಬೆಳಿಗ್ಗೆ ಎದ್ದ ತಕ್ಷಣ 1 ರಿಂದ 2 ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.* *10) ಪ್ರತಿ ಕೆಲಸವನ್ನು ಶಾಂತ ಮನಸ್ಸಿನಿಂದ ನಿಧಾನವಾಗಿ ಮಾಡಿ. ಅವಸರ ಹಾಗೂ ಒತ್ತಡದಲ್ಲಿ ಇರಬೇಡಿ* *11)ಊಟದ ನಡುವೆ 1-2 ಬಾರಿ ಸ್ವಲ್ಪ ನೀರು ಕುಡಿಯಿರಿ.* *12) ಬಿಸಿಲಿನಿಂದ ಮನೆಗೆ ಬಂದಾಗ ಐದು ನಿಮಿಷ ಸುಧಾರಿಸಿಕೊಳ್ಳಿ. ನಂತರ ತುಂಡು ಬೆಲ್ಲ ಸವಿದು ನೀರನ್ನು ಕುಡಿಯುವುದು.* *13) ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಬೀಜದ ನೀರನ್ನು ವಿಪುಲವಾಗಿ ಬಳಸಿ.* *14) ಜೀರಿಗೆ ಪುಡಿ 1 ಚಮಚ + ಕಲ್ಲು ಸಕ್ಕರೆಯ ಪುಡಿ ½ ಚಮಚ ಒಂದು ಲೋಟ ನೀರು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಿರಿ. ಉಷ್ಣತೆ ಕಡಿಮೆಯಾಗುತ್ತದೆ.* *15) ಪ್ರತಿದಿನ ಮಧ್ಯಾಹ್ನದ ಊಟದಲ್ಲಿ ಬಿಳಿ ಈರುಳ್ಳಿಯನ್ನು ತಿನ್ನಬೇಕು.* *16) ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಅಂಗಾಲಿಗೆ ಹಚ್ಚಿ ಕೆಲವು ಹನಿಗಳನ್ನು ನಾಭಿಯಲ್ಲಿ ಬಿಟ್ಟುಕೊಳ್ಳಬೇಕು. ಹಾಗೆಯೇ ದೇಶೀ ಹಸುವಿನ ತುಪ್ಪವನ್ನು ಮೂಗಿಗೆ ಹಚ್ಚಿಕೊಳ್ಳಿ.* *17) ಸೂರ್ಯನ ಶಾಖದಿಂದ ದೇಹವನ್ನು ರಕ್ಷಿಸಿಕೊಳ್ಳಿ. ಬಿಸಿಲಲ್ಲಿ ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಿ.

ಹೊರಗಿನ ಕೆಲಸಗಳನ್ನು ಬೆಳಿಗ್ಗೆ 11ಕ್ಕೆ ಮುಂಚೆ, ಸಂಜೆ 5:00 ನಂತರ ಮಾಡಿ. ತಿಳಿ ಬಣ್ಣದ ಸಡಿಲವಾದ ನೂಲಿನ ಬಟ್ಟೆಗಳನ್ನೇ ಬಳಸಿ. ಸಾಧ್ಯವಾದಷ್ಟು ನೆರಳಿನಲ್ಲಿ ನಡೆಯಿರಿ ಅಥವಾ ಟೋಪಿ, ಛತ್ರಿ, ಕನ್ನಡಕಗಳನ್ನು ಬಳಸಿ.* *18) ಮೇಲೆ ಸೂಚಿಸಿದ ಎಲ್ಲಾ ಮುಂಜಾಗ್ರತೆಯನ್ನು ಮಕ್ಕಳ ವಿಷಯದಲ್ಲೂ ವಹಿಸಿ. ಬಿಸಿಲಿನ ಸಮಯದಲ್ಲಿ ಹೊರಂಗಳ ಆಟಗಳನ್ನು ಆಡಲು ಬಿಡಬೇಡಿ.* *ಕಾಲ ಕಾಲಕ್ಕೆ ಸಾಕಷ್ಟು ನೀರು ಕುಡಿಯಿರಿ.* *ಆರೋಗ್ಯದ ಬಗ್ಗೆ ಉದಾಸೀನತೆ ಬೇಡ.