ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ವಿರುದ್ಧ ಆಹಾರ ಪದಾರ್ಥಗಳ ಬಗ್ಗೆ ಗೊತ್ತೇ!

ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ  ವಿರುದ್ಧ ಆಹಾರ ಪದಾರ್ಥಗಳ ಬಗ್ಗೆ ಗೊತ್ತೇ!

ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ವಿರುದ್ಧ ಆಹಾರ ಪದಾರ್ಥಗಳು ಹಲವು ಇದೆ. ಕೆಲವು ತರಕಾರಿ ಹಾಲು ಹಣ್ಣುಗಳು ಯಾವ ರೀತಿ ಸೇವಿಸಬೇಕು ಹಾಗೂ ವಿರುದ್ಧ ಆಹಾರಗಳು ಯಾವುದು ಎಂದು ಒಂದಿಷ್ಟು ತಿಳಿದುಕೊಳ್ಳೋಣ .

 ಕೆಲವು ಆಹಾರ ಪದಾರ್ಥಗಳು ಒಂದಕ್ಕೊಂದು ವಿರುದ್ಧ ಅಥವಾ ಅನಾನುಕೂಲಕರ ಗುಣಗಳನ್ನು ಹೊಂದಿರುತ್ತವೆ. ಆಯುರ್ವೇದದ ತತ್ವದ ಪ್ರಕಾರ ಇಂಥ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು. ಅಂತಹ ಪದಾರ್ಥಗಳು ಯಾವುವು? ಕೆಲವು ಉದಾಹರಣೆಗಳು:

1) ಹಾಲಿನೊಂದಿಗೆ ಹುಳಿ ಪದಾರ್ಥಗಳು. ಕರಿದ ಆಹಾರಗಳು ಮತ್ತು ಹಣ್ಣುಗಳು ಹಾನಿಕಾರಕ. ಹಾಲಿನೊಂದಿಗೆ ಮೊಸರು, ಉಪ್ಪು, ಹುಣಸೆಹಣ್ಣು, ಕಲ್ಲಂಗಡಿ, ಮಸಾಲೆಯುಕ್ತ, ಹುಳಿ ಆಹಾರವನ್ನು ಸೇವಿಸಬೇಡಿ.

2) ಮೊಸರು ಜೊತೆಗೆ ಪಾಯಸ, ಪನೀರ್, ಹಾಲು, ಕಲ್ಲಂಗಡಿ, ಬಾಳೆಹಣ್ಣು, ಮೂಲಂಗಿ, ಬಿಸಿ ಆಹಾರ ಅಥವಾ ಬಿಸಿ ಊಟ ಹಾನಿಕಾರಕ

3) ಮೂಲಂಗಿ, ಕಲ್ಲಂಗಡಿ, ದ್ರಾಕ್ಷಿ, ಎಳೆನೀರು, ಬಿಸಿನೀರು, ಇವು ಜೇನುತುಪ್ಪದ ಜೊತೆಗೆ ಹಾನಿಕಾರಕ. ತುಪ್ಪ ಮತ್ತು ಜೇನುತುಪ್ಪವನ್ನು ಎಂದಿಗೂ ಸಮಾನ ಪ್ರಮಾಣದಲ್ಲಿ ಸೇವಿಸಬಾರದು.

4) ಪಾಯಸದೊಂದಿಗೆ ಖಿಚಡಿ, ಹುಳಿ ಆಹಾರ, ಹಲಸಿನ ಹಣ್ಣು, ಸಾತು, ಮದ್ಯ, ಇತ್ಯಾದಿಗಳನ್ನು ತೆಗೆದುಕೊಳ್ಳಬೇಡಿ. 5) ಬೆಳ್ಳುಳ್ಳಿಯೊಂದಿಗೆ ಕಲ್ಲಂಗಡಿ, ಮೂಲಂಗಿ, ಮೂಲಂಗಿ ಎಲೆಗಳು, ಹಾಲು, ಮೊಸರು ಹಾನಿಕಾರಕ.

6) ಕಲ್ಲಂಗಡಿ ಜೊತೆ ಪುದೀನ, ತಣ್ಣೀರು ಕುಡಿಯಬೇಡಿ.

7) ತಣ್ಣೀರಿನ ಜೊತೆ ಕಡಲೆಕಾಯಿ, ತುಪ್ಪ, ಎಣ್ಣೆ, ಕಲ್ಲಂಗಡಿ, ಸಿಬೆ, ನೇರಳೆ, ಸೌತೆಕಾಯಿ ಅಥವಾ ಬಿಸಿ ಆಹಾರವನ್ನು ಸೇವಿಸಬೇಡಿ.

8) ಚಹಾದೊಂದಿಗೆ ಸೌತೆಕಾಯಿ, ಸೆಲರಿ, ತಿನ್ನಬೇಡಿ.

9) ಮೂಲಂಗಿಗಳೊಂದಿಗೆ ಬೆಲ್ಲ ಹಾನಿಕಾರಕವಾಗಿದೆ.

10) ಅಕ್ಕಿಯೊಂದಿಗೆ ವಿನೆಗರ್ ಹಾನಿ ಮಾಡುತ್ತದೆ.

ಆ) ಸೊಂಟ ನೋವು ಅಥವಾ ಕೀಲು ನೋವು ಇದ್ದಲ್ಲಿ ಬಾಳೆಹಣ್ಣು, ಪಾಲಕ್, ಟೊಮೆಟೊ, ಅಕ್ಕಿ, ಮೊಸರು, ಇತ್ಯಾದಿ ಮತ್ತು ಹುಳಿ ಆಹಾರವನ್ನು ಸೇವಿಸಬೇಡಿ. ಅವು ರೋಗವನ್ನು ಹೆಚ್ಚಿಸುತ್ತವೆ

ಈ) ಪ್ಲಾಸ್ಟಿಕ್ ಪಾತ್ರೆಗಳಲ್ಲಿ ದ್ರವಗಳನ್ನು ಇಡುವುದು ಅದರಲ್ಲಿ ಕುದಿಸುವುದು ಮತ್ತು ಅದರಲ್ಲಿಟ್ಟ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ರೋಗಗಳು ಉಂಟಾಗುತ್ತವೆ. ಆಹಾರ ಪದಾರ್ಥಗಳಿಗಾಗಿ ಪ್ಲಾಸ್ಟಿಕ್ ಗಳನ್ನು ಬಳಸಬಾರದು.

ಉ) ಕಂಚು, ತಾಮ್ರ, ಅಲ್ಯುಮಿನಿಯಂ ಅಥವಾ ಹಿತ್ತಾಳೆಯ ಪಾತ್ರೆಗಳಲ್ಲಿ ಇರಿಸಲಾದ ವಸ್ತುಗಳು ತುಪ್ಪ, ಎಣ್ಣೆ, ಹುಳಿ, ಮೊಸರು, ಮಜ್ಜಿಗೆ, ಹಾಲು, ಬೆಣ್ಣೆ, ಬೇಯಿಸಿದ ಬೇಳೆ, ತರಕಾರಿಗಳು ಇತ್ಯಾದಿ ವಿಷವಾಗುತ್ತದೆ. ಇಂಥ ಪಾತ್ರೆಗಳಲ್ಲಿ ಆಹಾರ ಪದಾರ್ಥಗಳನ್ನು ತುಂಬ ಹೊತ್ತು ಇಡಬಾರದು.

(ಮಾಹಿತಿ: ವನಿತಾ ಚಂದ್ರಮೋಹನ್ ಕುಶಾಲನಗರ)