ನಿಮಗೆ ಕಫ ಸಮಸ್ಯೆ ಇದೆಯೇ!
💠 ಶುಂಠಿ ಪುಡಿ ಎರಡು ಚಮಚದಷ್ಟು💠ತುಳಸಿ ಪುಡಿ ಒಂದು ಚಮಚದಷ್ಟು💠 ಏಲಕ್ಕಿ ಪುಡಿ ಕಾಲು ಚಮಚದಷ್ಟು💠 ಲವಂಗದ ಪುಡಿ ಕಾಲು ಚಮಚದಷ್ಟು ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ 💠 ಬೆಲ್ಲ ನಾಲ್ಕು ಚಮಚದಷ್ಟು 💠 ತುಪ್ಪ ಒಂದು ಚಮಚದಷ್ಟು 💠 ನೀರು ಸ್ವಲ್ಪ ಹಾಕಿ ಒಂದು ಎಳೆ ಪಾಕ ಬರುವಷ್ಟು ಆದ ಮೇಲೆ ಈ ಮೇಲಿನ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕೆಳಗಿಳಿಸಿ. ಸಣ್ಣ ಸಣ್ಣ ಉಂಡೆ ,( ಒಂದು ಒಟಾಣಿ ಕಾಳಿನ ಗಾತ್ರದಷ್ಟು ) ಮಾಡಿ ಇಟ್ಟುಕೊಳ್ಳಿ. ದಿನವೂ ಒಂದು ವಾರ ಬೆಳಿಗ್ಗೆ - ರಾತ್ರಿ ಒಂದೊಂದು ಉಂಡೆ ಬಾಯಲ್ಲಿ ಹಾಕಿ ಚೀಪುತ್ತಾ ರಸವನ್ನು ನಿಧಾನವಾಗಿ ನುಂಗುತ್ತಾ ಬನ್ನಿ. ಇದರಿಂದ ಗಂಟಲಲ್ಲಿ ತುಂಬಿದ ಕಫ ಕಡಿಮೆಯಾಗುವುದರ ಜೊತೆಗೆ, ಗಂಟಲು ಕೆರೆತ, ನೋವು, ಧ್ವನಿ ಬೀಳುವುದು ಕೂಡಾ ಕಡಿಮೆಯಾಗುತ್ತದೆ.
(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)
