ಕಾಡಾನೆ ದಾಳಿಗೆ ಮಹಿಳೆ ಬಲಿ

Mar 9, 2026 - 11:52
Mar 9, 2026 - 12:15
 0  4.9k
ಕಾಡಾನೆ ದಾಳಿಗೆ ಮಹಿಳೆ ಬಲಿ

ಕುಶಾಲನಗರ;ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.ಕಾಡಾನೆ ದಾಳಿಗೆ ಗ್ರಾ. ಪಂ.ಮಾಜಿ ಸದಸ್ಯೆ ಬಲಿಯಾಗಿದ್ದು, ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಂಜರಾಯಪಟ್ಟಣ ಗ್ರಾ.ಪಂ ಮಾಜಿ ಸದಸ್ಯೆ ಜಲಜಾಕ್ಷಿ (53) ಸಾವನ್ನಪ್ಪಿದ್ದಾರೆ.ಇದೇ ಅವಧಿಯಲ್ಲಿ ಸದಸ್ಯೆಯಾಗಿದ್ದ ಜಲಜಾಕ್ಷಿ,ಬಾಳೆಗುಂಡಿ ಹಾಡಿನಿವಾಸಿಯಾಗಿದ್ದಾರೆ.ರಸ್ತೆ ಬದಿ ನಡೆದು ಸಾಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿಮಾಡಿದ್ದು,ಸ್ಥಳಕ್ಕೆ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅರಣ್ಯಾಧಿಕಾರಿರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 3
Funny Funny 0
Angry Angry 1
Sad Sad 13
Wow Wow 0