ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ: ಎಂ.ಎ ಮುಸ್ತಫಾ ನೇತೃತ್ವದಲ್ಲಿ ವಿದ್ಯಾರ್ಥಿಗೆ ಸನ್ಮಾನ
ಸುಂಟ್ಟಿಕೊಪ್ಪ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 09ನೇ ರಾಂಕ್ ರಾಂಕ್ ಪಡೆದ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ನಿವಾಸಿ ಹರಿಣಿ ನಾಣಯ್ಯ ದಂಪತಿಗಳ ಪುತ್ರ ಡಿಂಪ್ ತಿಮ್ಮಯ್ಯ ಅವರನ್ನು ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ, ಸದಸ್ಯರಾದ ರಮೇಶ್ ಕೆ.ಕೆ ಹಾಗೂ ಗ್ರಾಮಸ್ಥರಾದ ಎಚ್.ಎಸ್ ಗಣೇಶ್ ರವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ ಡಿಂಪಲ್ ತಿಮ್ಮಯ್ಯ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯವಾಗಿದೆ.
ಡಿಂಪಲ್ ತಿಮ್ಮಯ್ಯ ಅವರ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಮುಸ್ತಫಾ ಅವರು ಈ ಸಂದರ್ಭ ತಿಳಿಸಿದರು.
ಡಿಂಪಲ್ ತಿಮ್ಮಯ್ಯ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಪಡೆದು ಶೇಕಡಾ 98.5 ರಷ್ಟು ಅಂಕಗಳಿಸಿದ್ದಾರೆ.