ಅನ್ವಾರುಲ್ ಹುದಾ ಕೆಎಸ್ಎ ಅಧ್ಯಕ್ಷರಾಗಿ ಹಂಸ ಮುಸ್ಲಿಯಾರ್ ಆಯ್ಕೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ವಿರಾಜಪೇಟೆಯ ಅನ್ವಾರುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು ನೂತನ ಅಧ್ಯಕ್ಷರಾಗಿ ಚೋಕಂಡಳ್ಳಿಯ ಹಂಸ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ.
ರಿಯಾದ್ ನ ಸ್ವಾದ್ ರೆಸ್ಟೋರೆಂಟ್ ಸಭಾಂಗಣದಲ್ಲಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಂಶುದ್ದೀನ್ ಮುಸ್ಲಿಯಾರ್ ಚಾಮಿಯಾಲ ಉದ್ಘಾಟಿಸಿ ಮಾತನಾಡಿದರು.
ಅನ್ವಾರುಲ್ ಹುದಾ ಶಿಲ್ಪಿ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ರಾಷ್ಟ್ರೀಯ ಸಮಿತಿ ಸಂಸ್ಥೆಗೆ ನೀಡಿದ ಸಹಾಯ ಸಹಕಾರವನ್ನು ಶ್ಲಾಘಿಸಿದರು.ಮುಂದೆಯೂ ಕೂಡ ಇದೆ ರೀತಿಯ ಸಹಕಾರ ಇರಲಿ ಎಂದರು.
ನಂತರ ಅಶ್ರಫ್ ಅಹ್ಸನಿಯವರ ನೇತೃತ್ವದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದು ನೂತನ ಅಧ್ಯಕ್ಷರಾಗಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ,ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಮುಸ್ಲಿಯಾರ್ ಪೇರಾತ,ಕೋಶಾಧಿಕಾರಿಯಾಗಿ ಮಜೀದ್ ಚೇರಂಬಾಣೆ, ಉಪಾಧ್ಯಕ್ಷರಾಗಿ ಹಂಸ ಹಾಜಿ ಜಿದ್ದಾ, ಅಬ್ದುಲ್ ರಹ್ಮನ್ ಹಾಜಿ ಅಯ್ಯಂಗೇರಿ,ಜೊತೆ ಕಾರ್ಯದರ್ಶಿಯಾಗಿ ರಫೀಕ್ ನೆಲ್ಲಿಹುದಿಕೇರಿ,ಅಬೂಬಕ್ಕರ್ ಎಮ್ಮೆಮಾಡು (ದಮಾಮ್),ವರ್ಕಿಂಗ್ ಕಾರ್ಯದರ್ಶಿಯಾಗಿ ಶಂಸುದ್ದೀನ್ ತಕ್ಕಪಳ್ಳಿ (ರಿಯಾದ್) ರವರನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಜೀದ್ ಚೇರಂಬಾಣೆ ಸ್ವಾಗತಿಸಿ,ನೂತನ ಕಾರ್ಯದರ್ಶಿ ಶಂಸುದ್ದೀನ್ ಮುಸ್ಲಿಯಾರ್ ಸರ್ವರನ್ನು ವಂದಿಸಿದರು.