ಗಯಾನ ದೇಶದಲ್ಲಿ ಮೃತಪಟ್ಟ ಕೊಡಗಿನ ಗಿರೀಶ್ ಮೃತದೇಹ ಆಗಸ್ಟ್ 07 ರಂದು ಬೆಂಗಳೂರಿಗೆ

ಗಯಾನ ದೇಶದಲ್ಲಿ ಮೃತಪಟ್ಟ ಕೊಡಗಿನ ಗಿರೀಶ್ ಮೃತದೇಹ ಆಗಸ್ಟ್ 07 ರಂದು ಬೆಂಗಳೂರಿಗೆ
ಗಿರೀಶ್

‌ಮಡಿಕೇರಿ:ದಕ್ಷಿಣ ಅಮೇರಿಕಾದ ಗಯಾನ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಪಿ.ಬಿ ಗಿರೀಶ್ ಅವರ ಮೃತದೇಹವನ್ನು ಹೊತ್ತ ಕಾರ್ಗೋ ವಿಮಾನ ಗಯಾನದಿಂದ ಹೊರಟ್ಟಿದ್ದು ಆಗಸ್ಟ್ 07 ರಂದು ಬೆಂಗಳೂರು ತಲುಪಲಿದೆ.ಗಯಾನ ದೇಶದಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗಿರೀಶ್ ಅನಾರೋಗ್ಯದಿಂದ ಕಳೆದ ತಿಂಗಳು ಜುಲೈ 14 ರಂದು ಸಾವನ್ನಪ್ಪಿದ್ದರು. ಗಯಾನದಿಂದ ಗಿರೀಶ್ ಅವರ ಮೃತದೇಹ ಭಾರತಕ್ಕೆ ತರಲು 13ಲಕ್ಷ ರೂ ವೆಚ್ಚವಾಗಲಿದ್ದು,ಶಾಸಕ ಎ.ಎಸ್ ಪೊನ್ನಣ್ಣ ಅವರ ಪ್ರಯತ್ನದಿಂದ 3.60 ಲಕ್ಷ ರೂ ಹಣವನ್ನು ರಾಜ್ಯ ಸರ್ಕಾರದ ನೆರವು ನೀಡಿದೆ.ಅದಲ್ಲದೇ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಕೂಡ ಗಿರೀಶ್ ಮೃತದೇಹ ನಾಡಿಗೆ ತರಲು ಕೈಜೋಡಿಸಿದ್ದಾರೆ.