ಗರ್ಭನಿರೋಧಕವನ್ನೇ ಟ್ರೋಫಿಯಂತೆ ಕೈಯ್ಯಲ್ಲಿ ಹಿಡಿದು ಜನಿಸಿದ ಮಗು | ವೈದ್ಯರು ನಕ್ಕು ಸುಸ್ತೋ ಸುಸ್ತು! “ವಿಜಯದ ಟ್ರೋಫಿಯೊಂದಿಗೆ ಜೀವನ ಪ್ರಾರಂಭಿಸಿದ ಚಿಕ್ಕ ಚಾಂಪಿಯನ್” ಎಂದ ಜನರು

Oct 1, 2025 - 12:45
 0  857
ಗರ್ಭನಿರೋಧಕವನ್ನೇ ಟ್ರೋಫಿಯಂತೆ ಕೈಯ್ಯಲ್ಲಿ ಹಿಡಿದು ಜನಿಸಿದ ಮಗು | ವೈದ್ಯರು ನಕ್ಕು ಸುಸ್ತೋ ಸುಸ್ತು!  “ವಿಜಯದ ಟ್ರೋಫಿಯೊಂದಿಗೆ ಜೀವನ ಪ್ರಾರಂಭಿಸಿದ ಚಿಕ್ಕ ಚಾಂಪಿಯನ್” ಎಂದ ಜನರು
Photo credit: INDIA TODAY

ಬ್ರೆಜಿಲ್: ಬ್ರೆಝಿಲ್ ನ ಗೋಯಾಸ್ನಲ್ಲಿ ಜನಿಸಿದ ಮಗು ಮ್ಯಾಥ್ಯೂಸ್ ಗೇಬ್ರಿಯಲ್ ಕೈಯ್ಯಲ್ಲಿ ತನ್ನ ತಾಯಿಯ ಗರ್ಭಧಾರಣೆಯನ್ನು ತಡೆಯಬೇಕಿದ್ದ ಐಯುಡಿ ಗರ್ಭನಿರೋಧಕ ಕಾಪರ್‌ ಟಿ ಯನ್ನು ಟ್ರೋಫಿಯಂತೆ ಹಿಡಿದುಕೊಂಡು ಜನಿಸಿದೆ. ಇದನ್ನು ಕಂಡು ವೈದ್ಯರೂ, ಕುಟುಂಬ ಸದಸ್ಯರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಗರ್ಭಾಶಯದಲ್ಲಿ ಗರ್ಭಧಾರಣೆ ತಡೆಯಬೇಕಾದ ಸಾಧನ ಮಗು ಬಂದರೂ “ಕೆಲಸ ಮಾಡಲೇ ಇಲ್ಲ!

ಮಗುವಿನ ಜನನದ ಬಳಿಕ ವೈದ್ಯೆ ನಟಾಲಿಯಾ ರೊಡ್ರಿಗಸ್ ಕಾಪರ್ ಟಿ ಸಾಧವನವನ್ನು ಮಗುವಿನ ಕೈಗೆ ಇಟ್ಟು ಫೋಟೋ ತೆಗೆದರು. ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, “ಇದು ನನ್ನ ವಿಜಯ ಟ್ರೋಫಿ! ನನ್ನನ್ನು ತಡೆಯಲು ಸಾಧ್ಯವಾಗದ ಐಯುಡಿ!” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಜನರು ಹಾಸ್ಯಭರಿತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಮಗು ಈಗಾಗಲೇ ಗರ್ಭನಿರೋಧಕವನ್ನು ಸೋಲಿಸಿದೆ!” ಎಂದು ಕಮೆಂಟ್ ಮಾಡಿದ್ದಾರೆ.ಇನ್ನು ಕೆಲವರು “ಈಗಿನಿಂದ ಈತನಿಗೆ ಯಾವ ಅಡ್ಡಿಯೂ ಅಡ್ಡಿಯಾಗದು” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನು ಕೆಲವರು “ವಿಜಯದ ಟ್ರೋಫಿಯೊಂದಿಗೆ ಜೀವನ ಪ್ರಾರಂಭಿಸಿದ ಚಿಕ್ಕ ಚಾಂಪಿಯನ್” ಎಂದು ಪೋಸ್ಟ್ ಮಾಡಿದ್ದಾರೆ.

ಮಹಿಳೆ ಕ್ವೈಡಿ ಅರೌಜೊ ಡಿ ಒಲಿವೇರಾ ಸುಮಾರು ಎರಡು ವರ್ಷಗಳಿಂದ ಕಾಪರ್ ಟಿ ಅಳವಡಿಸಿದ್ದರೂ, ಗರ್ಭಿಣಿಯಾಗಿರುವುದು ತಿಳಿದ ಬಳಿಕ ವೈದ್ಯರು ಅದನ್ನು ತೆಗೆದುಹಾಕಲಿಲ್ಲ. ಕೆಲ ತೊಂದರೆಗಳ ನಡುವೆಯೂ ಗರ್ಭಾವಧಿ ಯಶಸ್ವಿಯಾಗಿ ಮುಗಿದು, ಮಗು ಆರೋಗ್ಯಕರವಾಗಿ ಜನಿಸಿದೆ. ತಾಯಿ ಮತ್ತು ಮಗು ಇಬ್ಬರೂ ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 3
Dislike Dislike 0
Love Love 1
Funny Funny 0
Angry Angry 1
Sad Sad 0
Wow Wow 0