ಇರಾಕ್:ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡದಲ್ಲಿ 50 ಮಂದಿ ಮೃತ್ಯು

ಬಾಗ್ದಾದ್: ಶಾಪಿಂಗ್ ಮಾಲ್ ವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 50 ಮಂದಿ ಮೃತಪಟ್ಟಿರುವ ಘಟನೆ ಪೂರ್ವ ಇಂದು ಇರಾಕ್ ನ ಕುಟ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತು ಅಧಿಕಸುದ್ದಿ ಸಂಸ್ಥೆ ಐಎನ್ಎಗೆ ಪ್ರತಿಕ್ರಿಯಿಸಿದ ವಾಸಿಟ್ ಪ್ರಾಂತ್ಯದ ಗವರ್ನರ್, “ಮೃತರ ಸಂಖ್ಯೆ 50ಕ್ಕೆ ತಲುಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಲು ಕಾರಣವೇನು ಎಂಬ ಕುರಿತು ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ” ಎಂದು ತಿಳಿಸಿದ್ದಾರೆ.