ನಿಮಗೆ ಮೈಗ್ರೇನ್ ಸಮಸ್ಯೆ ಇದೆಯೇ!

ನಿಮಗೆ ಮೈಗ್ರೇನ್ ಸಮಸ್ಯೆ ಇದೆಯೇ!

ಅರ್ಧತಲೆನೋವು ಎಂದರೆ ಸಾಮಾನ್ಯವಾಗಿ ಮೈಗ್ರೇನ್ ಎಂದರ್ಥ. ತಲೆಯ ಯಾವುದೇ ಭಾಗದಲ್ಲಿ ಅಥವಾ ಇಡೀ ತಲೆಗೆ ನೋವುಂಟು ಮಾಡಬಹುದು. ತಲೆಯು ಅರ್ಧ ಭಾಗದಲ್ಲಿ ಬಹಳ ಹಿಂಸಾತ್ಮಕವಾಗಿ ಮಿಡಿಯುತ್ತದೆ; ಆದರೆ, ಹಲವು ಬಾರಿ ತಲೆನೋವು ವಾಕರಿಕೆ ಅಥವಾ ವಾಂತಿಗೆ ಕಾರಣವಾಗುತ್ತದೆ. ಅರ್ಧ ತಲೆನೋವು ಯಾರಿಗಾದರೂ ಸಂಭವಿಸಬಹುದು. ಇದು ಮತ್ತೆ ಮತ್ತೆ ಸಂಭವಿಸುತ್ತದೆ; ಆದರೆ ಅದರ ಆವರ್ತನ, ತೀವ್ರತೆ ಮತ್ತು ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ರೋಗಲಕ್ಷಣಗಳು: ವಾಕರಿಕೆ ಅಥವಾ ವಾಂತಿ, ಬೆಳಕು, ಬಿಸಿಲು ಹಾಗು ಧ್ವನಿಗೆ ತೀವ್ರ ಸಂವೇದನೆ ಶೀಲತೆ, ಅಸಹನೆ, ಸುಸ್ತು, ಇತ್ಯಾದಿ ಸೇರಿವೆ. ಇದರ ನಿಖರವಾದ ಅವಧಿಯನ್ನು ಹೇಳಲಾಗುವುದಿಲ್ಲ. ಕೆಲಸದ ಒತ್ತಡ ಇರುವವರಿಗೆ ತುಂಬಾ ತಲೆನೋವು ಬರುತ್ತದೆ.

ಧ್ಯಾನ ಮತ್ತು ಪ್ರಾಣಾಯಾಮವು ಈ ಈ ಸಮಸ್ಯೆಯನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ತಲೆನೋವಿನಿಂದ ಗಮನಾರ್ಹ ಉಪಶಮನ ನೀಡುವ ಕೆಲವು ಆಹಾರ ಪದಾರ್ಥಗಳಿವೆ. ಇದರಲ್ಲಿ ಶುಂಠಿಯ ಹೆಸರನ್ನು ಮೊದಲು ತೆಗೆದುಕೊಳ್ಳಬೇಕು. ಹಾಗಾಗಿ ನಾವು ಶುಂಠಿಯನ್ನು ‘ನೋವು ನಿವಾರಕ’ವಾಗಿ ನೋಡಬಹುದು.

ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ನಿಂಬೆ ಹಿಂಡಿ. ರುಚಿಗೆ ಸ್ವಲ್ಪ ಕಪ್ಪು ಉಪ್ಪನ್ನು ಸೇರಿಸಿ ಮತ್ತು ಲಘುವಾಗಿ ಅಗಿಯಿರಿ. ಶುಂಠಿಯನ್ನು ಜಗಿಯುವುದು ಸರಳವಾದ ತಲೆನೋವನ್ನು ನಿಲ್ಲಿಸುತ್ತದೆ, ಆದರೆ ಇದು ನಿರಂತರ ಮೈಗ್ರೇನ್ ಅನ್ನು ಸಹ ನಿಯಂತ್ರಿಸಬಹುದು.

 ಶುಂಠಿ ಉತ್ತಮ ನೋವು ನಿವಾರಕವಾಗಿದೆ

ಅರ್ಧ ತಲೆನೋವಿನ ಸಮಸ್ಯೆಗೆ - ಶುಂಠಿ ಜೊತೆಗೆ ಜಾಯಿಕಾಯಿಯ ಪೇಸ್ಟ್ ಅನ್ನು ಹುಬ್ಬಿನ ಮೇಲೆ ಹಚ್ಚಬೇಕು. ಸೀನು ಬರಿಸುವ ಯಾವುದೇ ಉಪಾಯದಿಂದ ಸೀನುವಿಕೆಯು ಅರ್ಧ- ತಲೆನೋವನ್ನು ಕಡಿಮೆ ಮಾಡುತ್ತದೆ ಅಥವಾ ಬೆಳಿಗ್ಗೆ ಪೇಡೆಯನ್ನು ತಿನ್ನುವುದರಿಂದ ನಿವಾರಣೆಯಾಗುತ್ತದೆ. ಅರ್ಧ ತಲೆನೋವು ಪಿತ್ತ ಮತ್ತು ಶೀತದಿಂದ ಉಂಟಾಗುತ್ತದೆ.

ಪೇಢಾ ಪಿತ್ತವನ್ನು ಕಡಿಮೆ ಮಾಡುತ್ತದೆ ಮತ್ತು ಸೀನುವಿಕೆಯು ಶೀತವನ್ನು ನಿವಾರಿಸುತ್ತದೆ. ಅರ್ಧ ತಲೆ ನೋವಿನಲ್ಲಿ ತಲೆಯ ಅರ್ಧಭಾಗದಲ್ಲಿ ನೋವು ಅಸಹನೀಯವಾಗಿರುತ್ತದೆ ಮತ್ತು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಕಡಿಮೆಯಾಗುತ್ತದೆ. ಪದೇ ಪದೇ ತಲೆನೋವು ಇರುವವರಿಗೆ ಎರಡರಿಂದ ನಾಲ್ಕು ಚಮಚ ಅಗಸೆ ಬೀಜದ ಪುಡಿಯನ್ನು ಎರಡರಿಂದ ಮೂರು ತಿಂಗಳವರೆಗೆ ನಿಯಮಿತವಾಗಿ ಸೇವಿಸಬೇಕು. ಅಗಸೆ ಬೀಜಗಳ ಪುಡಿ ಮಾಡಲು, ಮೊದಲು ಅವುಗಳನ್ನು ಸ್ವಲ್ಪವೇ ಹುರಿದುಕೊಳ್ಳಬೇಕು. 

ಬರಹ🖋: ನಿತಾ ಚಂದ್ರಮೋಹನ್ ಕೊಡಗು