ಎಳನೀರು ಕುಡಿಯುವುದರಿಂದ ಏನೆಲ್ಲಾ Health Benefits ಇದೆ ಗೊತ್ತೇ!?

ಎಳನೀರನ್ನು ಯಾವ ಉದ್ದೇಶಕ್ಕೆ ತೆಗೆದುಕೊಳ್ಳುತ್ತೇವೆ ಅದರ ಮೇಲೆ ನಿರ್ಧರಿತವಾಗುತ್ತದೆ ಹೇಗೆ ತೆಗೆದುಕೊಳ್ಳುವುದು ಎನ್ನುವುದು!
(ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ)
1) ಮರದಿಂದ ಇಳಿಸಿ ಎಳೆ ನೀರನ್ನು ಹಾಗೆ ಕುಡಿಯುವುದರಿಂದ ಮೂತ್ರಕೋಶ ಶುದ್ದಿಯಾಗುತ್ತದೆ.
2) ಎಳನೀರಿಗೆ ನಿಂಬೆರಸ ಸೇರಿಸಿ ಕುಡಿಯುವುದರಿಂದ ದೇಹ ತಂಪಾಗುತ್ತದೆ.
3) ರಾತ್ರಿ ಎಳನೀರಿಗೆ ಜೀರಿಗೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ಕರುಳು ಶುದ್ದಿ ಯಾಗುತ್ತದೆ.
4) ಎಳನೀರಿನೊಂದಿಗೆ ಎಳೆನೀರಿನ ಗಂಜಿಯನ್ನು ಸೇರಿಸಿ ಮಿಕ್ಸಿ ಮಾಡಿ ಕುಡಿಯುವುದರಿಂದ ದೇಹದ ಉರಿ ಶಮನವಾಗುತ್ತದೆ.
5) ಎಳನೀರೋಂದಿಗೆ ಧನಿಯಾ ಪುಡಿ ಸೇರಿಸಿ ಸೇವಿಸುವುದರಿಂದ ಶಕ್ತಿ ವೃದ್ಧಿಯಾಗುತ್ತದೆ.
6) ಎಳನೀರಿಗೆ ಕಬ್ಬಿಣದ ಸೌಟ್ ಕಾಯಿಸಿ ಅದ್ದಿ ಕುಡಿಯುವುದರಿಂದ ಎಳನೀರಿನಿಂದ ಆಗುವ ಕಫ ನಿಯಂತ್ರಣಕ್ಕೆ ಬರುತ್ತದೆ.
7) ಎಳನೀರನ್ನು ಕಾಯಿಸಿ ಬೆಲ್ಲ ಮಾಡಿ ಗಾಯಕ್ಕೆ ಹಚ್ಚುವುದರಿಂದ ಆಗತಾನೆ ಆದ ಗಾಯ ಬೇಗನೆ ವಾಸಿಯಾಗುತ್ತದೆ.