ಮೂಳೆಗಳ ಅಸ್ತಿತ್ವಕ್ಕೆ ಅಮ್ಮನ ಮನೆ ಮದ್ದು

💠 ಕರಿ ಎಳ್ಳು ಒಂದು ಲೋಟದಷ್ಟು ಹುರಿದು , ತಣಿಸಿ ಅರ್ಧ ಭಾಗದಷ್ಟು ನುಣ್ಣಗೆ ಪುಡಿಮಾಡಿಕೊಳ್ಳಿ. 💠 ಬಾದಾಮಿ ಹದಿನೈದು 💠 ಖರ್ಜೂರ ಹತ್ತು ... ಬೀಜ ತೆಗೆದು, ಇವೆರಡನ್ನು ಹುರಿದು ,ಪುಡಿ ಮಾಡಿಕೊಳ್ಳಿ. 💠 ನಾಲ್ಕು ಚಿಟಿಕೆಯಷ್ಟು ಯಾಲಕ್ಕಿ ಪುಡಿ 💠 ಎರಡು ಚಿಟಿಕೆಯಷ್ಟು ಶುಂಠಿ ಪುಡಿ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ 💠 ಅರ್ಧ ಲೋಟದಷ್ಟು ಬೆಲ್ಲ 💠 ಸ್ವಲ್ಪ ನೀರು 💠 ನಾಲ್ಕು ಚಮಚದಷ್ಟು ತುಪ್ಪ ಹಾಕಿ ಸಣ್ಣ ಬೆಂಕಿಯಲ್ಲಿ ಎರಡು ಎಳೆ ಪಾಕ ಮಾಡಿಕೊಂಡು, ಈ ಮೇಲಿನ ಮಿಶ್ರಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ಇಟ್ಟುಕೊಳ್ಳಿ. ದಿನಾಲೂ ಒಂದು ಉಂಡೆ ತಿಂದು , ಹಾಲು ಕುಡಿಯುವುದರಿಂದ.... ✴️ ಮುರಿದ ಮೂಳೆ ಜೋಡಣೆಯಾಗಲು ಸಹಾಯಕ, ✴️ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ✴️ ಸಂಧು ನೋವು, ನರಗಳ ಸೆಳೆತ ಕಡಿಮೆಯಾಗುತ್ತದೆ. ✴️ ವಿಟಾಮಿನ್ ಬಿ ಹೆಚ್ಚಾಗುತ್ತದೆ. ✴️ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಕೊಡಗಿನವರಿಗೆಲ್ಲ ಎಳ್ಳುಅಡಿಗೆ ನೆನಪಾಗಬಹುದು ಯಾಕೆ ತಡ ಇಂದಿನಿಂದಲೇ ಮಕ್ಕಳಿಗೆ ಪಾರಂಪರಿಕವಾಗಿ ನಡೆದು ಬಂದ ಪದ್ಧತಿಯ ಎಳ್ಳಡಿಗೆ ಮೆಲ್ಲಲು ಕಲಿಸಿ ನೀವು ಮೆಲ್ಲಮೆಲ್ಲನೆ ಪಾರಂಪರಿಕ ಪದ್ಧತಿಗಳನ್ನು ಪ್ರಾರಂಭಿಸಿ.. 🙏
ಮಾಹಿತಿ:ವನಿತಾ ಚಂದ್ರಮೋಹನ್ ಕುಶಾಲನಗರ