ಬಿಸಿಲಿನ ತಾಪದಿಂದ ಸೆಕೆ ಗುಳ್ಳೆಗಳು

ಬಿಸಿಲಿನ ತಾಪದಿಂದ ಸೆಕೆ ಗುಳ್ಳೆಗಳು

ಬಿಸಿಲಿನ ತಾಪದಿಂದ ಸೆಕೆ ಗುಳ್ಳೆಗಳು(ಬೆವರು ಸಾಲೆಗಳು ) ಕಾಣಿಸಿಕೊಂಡಾಗ ಅಕ್ಕಿ ತೊಳೆದ ನೀರಿನಿಂದ ಗುಳ್ಳೆಗಳು ಇರುವ ಭಾಗವನ್ನು ತೊಳೆಯುತ್ತಿದ್ದರೆ ನಾಲ್ಕೈದು ದಿನಗಳಲ್ಲಿ ಸಂಪೂರ್ಣವಾಗಿ ಗುಣವಾಗುತ್ತದೆ. ಜೀರಿಗೆಯನ್ನು ಚೆನ್ನಾಗಿ ಪುಡಿ ಮಾಡಿ ತೆಂಗಿನ ಹಾಲಿನಲ್ಲಿ ಕಲಸಿ ದೇಹಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಅಥವಾ ಮೈಯಲ್ಲಿ ಈ ಔಷಧಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಈ ಕ್ರಮವನ್ನು ಸತತವಾಗಿ ನಾಲ್ಕರಿಂದ ಐದು ದಿನ ಮುಂದುವರಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಸ್ನಾನದ ಕೊನೆಯ ಒಂದು ಜಗ್ ನೀರಿಗೆ ಅರ್ಧ ಹೋಳು ನಿಂಬೆರಸ ಹಾಕಿ ಸ್ನಾನ ಮಾಡುವುದರಿಂದ ಬೆವರಿನ ಸಮಸ್ಯೆ ಕಡಿಮೆಯಾಗುತ್ತದೆ ಬೆವರಿನ ಸಮಸ್ಯೆ ಇರುವರು ತಿಂಗಳಿಗೊಮ್ಮೆ ಈ ಪದ್ಧತಿಯನ್ನು ಅನುಸರಿಸಿನೀರು ಜಾಸ್ತಿ ಕುಡಿಬೇಕು, ನಿತ್ಯವು ನೆಲ್ಲಿಕಾಯಿ ತಿನ್ನಬೇಕು.

ಮಾಹಿತಿ: ವನಿತಾ ಚಂದ್ರಮೋಹನ್ ಕೊಡಗು