ಮೂತ್ರಕೋಶದಲ್ಲಿ ಕಲ್ಲು ಕಟ್ಟುವ ಸಮಸ್ಯೆ ಇದೆಯೇ!

ಮೂತ್ರಕೋಶದಲ್ಲಿ ಕಲ್ಲು ಕಟ್ಟುವ ಸಮಸ್ಯೆ ಇದೆಯೇ!

(ವನಿತಾ ಚಂದ್ರಮೋಹನ್ ಕುಶಾಲನಗರ)

ಬೇಕಾದಷ್ಟು ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗದಿರುವುದರಿಂದ ಮೂತ್ರಕೋಶದಲ್ಲಿ ಕಲ್ಲು ಕಟ್ಟುತ್ತದೆ. ಇಂತಹ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ಮತ್ತು ಟೊಮೆಟೊ ಹಣ್ಣುಇವುಗಳ ಜ್ಯೂಸ್ ಹೆಚ್ಚಾಗಿ ಕುಡಿಯಬೇಕು. ಇದರಿಂದ ದೇಹಕ್ಕೆ ಪೋಟಾಸಿಯಂ ಹೇರಳವಾಗಿ ಸಿಗುತ್ತದೆ. ದಿನಾ ಎರಡು ಕ್ಯಾರೆಟ್ ಖಾಲಿ ಹೊಟ್ಟೆಗೆ ತಿನ್ನುವ ಅಭ್ಯಾಸ ಮಾಡಿಕೊಂಡರೆ ಮೂತ್ರಕೋಶದಲ್ಲಿನ ಕಲ್ಲು ಕಟ್ಟುವ ಸಮಸ್ಯೆ ಪರಿಹಾರವಾಗುತ್ತದೆ. ನಿತ್ಯವೂ ಅನನಾಸ್ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಮೂತ್ರಕೋಶದ ಕಲ್ಲು ಕರಗುವುದಲ್ಲದೆ ಎಲ್ಲ ತರದ ಮೂತ್ರದ ಸಮಸ್ಯೆಗಳು ಪರಿಹಾರವಾಗುತ್ತದೆ. ಬೂದು ಕುಂಬಳರಸ, ಬಾಳೆದಿಂಡಿನ ಪಲ್ಯ, ಸೋರೆಕಾಯಿ, ಸೌತೆಕಾಯಿ ಇವುಗಳ ಸೇವನೆ ನಿತ್ಯ ವಾಡಿಕೆ ಮಾಡಿಕೊಂಡರೆ ಮೂತ್ರ ಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಊಟಕ್ಕ ಹುರುಳಿ ರಸಂ ಉಪಯೋಗಿಸಿದರೆ ಕೂಡ ಒಳ್ಳೆಯದು. ಅರ್ಧ ಕಪ್ ನೆಲ್ಲಿ ಸೊಪ್ಪಿನ ರಸಕ್ಕೆ 15ml ಎಳ್ಳೆಣ್ಣೆ ಬೆರೆಸಿ ಏಳು ದಿನ ಮುಂಜಾನೆ ಖಾಲಿ ಹೊಟ್ಟೆಗೆ ಸೇವಿಸಬೇಕು. ಕಾಲು ರಾಗಿ ಹುಡಿಗೆ 15 ಎಂ ಎಲ್ ಜೇನು ಬೆರೆಸಿ ಅರ್ಧ ಲೀಟರ್ ಎಮ್ಮೆ ಹಾಲಿನಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ಬೆಳಿಗ್ಗೆ ಎದ್ದ ಕೂಡಲೇ ಕುಕ್ಕುರು ಕಾಲಿನಲ್ಲಿ ಕುಳಿತು ಪೂರ್ತಿ ಕುಡಿಯಬೇಕು ಈ ಔಷಧಿ ಏಳು ದಿನ ಮಾಡಿದರೆ ಉತ್ತಮ ಪರಿಣಾಮ ನೀಡುತ್ತದೆ. ( ಇದರಲ್ಲಿ ಯಾವುದು ಬೇಕು ಅದನ್ನು ಮಾತ್ರ ಪ್ರಯೋಗಿಸಬೇಕು ).