ಲಾವಂಚದ ಬೇರಿನಿಂದಾಗುವ ಪ್ರಯೋಜನವೇನು ಗೊತ್ತೇ!
💠 ಲಾವಂಚದ ಬೇರನ್ನು ಸಣ್ಣಗೆ ಚೂರು ಮಾಡಿ, 💠 ಒಂದು ಲೋಟ ನೀರು ಹಾಕಿ ಕುದಿಸಿ. ಕಾಲು ಭಾಗ ಬತ್ತಬೇಕು. ಮುಕ್ಕಾಲು ಭಾಗ ಉಳಿದ ನಂತರ ಈ ನೀರನ್ನು ತಣಿಯಲು ಬಿಡಿ. ಈ ನೀರನ್ನು ಕುಡಿಯುವುದರಿಂದ.. 🔘 ದೇಹ ತಂಪಾಗುತ್ತದೆ. 🔘 ಪಿತ್ತ ಕಡಿಮೆಯಾಗುತ್ತದೆ. 🔘 ಬಾಯಿ ಹುಣ್ಣು ನಿವಾರಣೆಯಾಗುತ್ತದೆ. 🔘 ರಕ್ತ ಶುದ್ದಿಯಾಗುತ್ತದೆ. 🔘 ಮೂತ್ರ ತೊಂದರೆ ನಿವಾರಣೆಯಾಗುತ್ತದೆ. 🔘 ಉಷ್ಣ ಜ್ವರ ಕಡಿಮೆಯಾಗುತ್ತದೆ. 🔘 ತಲೆ ಹೊಟ್ಟು ಕಡಿಮೆಯಾಗುತ್ತದೆ. 🔘 ಉಷ್ಣ ವಾತ ಕಡಿಮೆಯಾಗುತ್ತದೆ. ಲಾವಂಚದ ಬೇರನ್ನು ಕುದಿಸಿ ಕುಡಿಯಲು ಸಾಧ್ಯವಿಲ್ಲದಿದ್ದರೆ, ನೀರಿಗೆ ಹಾಕಿ ಇಟ್ಟು, ದಿನವೀಡಿ ಈ ನೀರನ್ನು ಕುಡಿಯಬಹುದು.
(ವನಿತಾ ಚಂದ್ರ ಮೋಹನ್ ಕುಶಾಲನಗರ)