ಗಾಝಾ ಯುದ್ಧ ಅಂತ್ಯಕ್ಕೆ 20 ಅಂಶಗಳ ಯೋಜನೆಗೆ ನೆತನ್ಯಾಹು ಒಪ್ಪಿಗೆ: ಟ್ರಂಪ್ | Sorry ಕತಾರ್ ಎಂದ ಇಸ್ರೇಲ್ ಅಧ್ಯಕ್ಷ ನೆತನ್ಯಾಹು!

Sep 30, 2025 - 01:01
Sep 30, 2025 - 01:03
 0  427
ಗಾಝಾ ಯುದ್ಧ ಅಂತ್ಯಕ್ಕೆ 20 ಅಂಶಗಳ ಯೋಜನೆಗೆ ನೆತನ್ಯಾಹು ಒಪ್ಪಿಗೆ: ಟ್ರಂಪ್   | Sorry ಕತಾರ್ ಎಂದ ಇಸ್ರೇಲ್ ಅಧ್ಯಕ್ಷ ನೆತನ್ಯಾಹು!
Photo credit: Reuters

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಓವಲ್ ಕಚೇರಿಯಲ್ಲಿ ದೊಡ್ಡ ಮಟ್ಟದ ಸಭೆ ನಡೆಸಿ ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲ್–ಹಮಾಸ್ ಯುದ್ಧವನ್ನು ಅಂತ್ಯಗೊಳಿಸಲು 20 ಅಂಶಗಳ ಯೋಜನೆಗೆ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ. ಶ್ವೇತಭವನ ಈ ಮಾಹಿತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಟ್ರಂಪ್ ಪ್ರಸ್ತಾವಿತ ಯೋಜನೆಯ ಪ್ರಮುಖ ಅಂಶವಾಗಿ, ಹಮಾಸ್ ಒಪ್ಪಿದ್ದರೆ ಎಲ್ಲಾ ಸೆರೆಯಾಳುಗಳನ್ನು 72 ಗಂಟೆಗಳೊಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. “ಬಂಧಿತರು ಹಿಂತಿರುಗುತ್ತಿದ್ದಾರೆ… ಯುವಕರ ಶವಗಳು ಕೂಡ ತಕ್ಷಣ ಹಿಂತಿರುಗುತ್ತಿವೆ,” ಎಂದು ಅವರು ಘೋಷಿಸಿದರು.

 ಶ್ವೇತಭವನದ ಪ್ರಕಾರ, ಈ ತಿಂಗಳ ಆರಂಭದಲ್ಲಿ ದೋಹಾದ ಮೇಲಿನ ಇಸ್ರೇಲಿ ದಾಳಿಯಲ್ಲಿ ನಾಗರಿಕನೊಬ್ಬ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ನೆತನ್ಯಾಹು ಕತಾರ್‌ ಗೆ ಕ್ಷಮೆಯಾಚಿಸಿದ್ದಾರೆ.

ಇದೀಗಲೂ ಹಿಂಸಾಚಾರ ಮುಂದುವರಿದಿದ್ದು, ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಡ್ರೋನ್ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಗಾಝಾದಾದ್ಯಂತ ಇಸ್ರೇಲಿ ದಾಳಿಗಳು ನಡೆದಿದ್ದು, ಬೆಳಗಿನ ಜಾವದಿಂದ ಕನಿಷ್ಠ 33 ಫೆಲೆಸ್ತೀನ್ ಜನರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

2023 ರ ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಇಸ್ರೇಲ್–ಗಾಝಾ ಯುದ್ಧದಲ್ಲಿ ಇದುವರೆಗೆ ಕನಿಷ್ಠ 66,055 ಜನರು ಸಾವನ್ನಪ್ಪಿದ್ದು, 1.68 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. 2023 ಅಕ್ಟೋಬರ್ 7 ರ ಹಮಾಸ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,139 ಜನರು ಸಾವನ್ನಪ್ಪಿ, ಸುಮಾರು 200 ಮಂದಿಯನ್ನು ಒತ್ತೆಯಾಳುಗಳಾಗಿ ಕರೆದೊಯ್ಯಲಾಗಿತ್ತು.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 0