ಯೆಮೆನ್: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ರದ್ದುಗೊಳ್ಳುವ ಸಾಧ್ಯತೆ! ಕ್ಷಮಾದಾನ ನೀಡಲು ಕೊಲೆಯಾದ ತಲಾಲ್ ಕುಟುಂಬ ಒಪ್ಪಿಗೆ!

ಯೆಮೆನ್: ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲುಶಿಕ್ಷೆ ರದ್ದುಗೊಳ್ಳುವ ಸಾಧ್ಯತೆ!  ಕ್ಷಮಾದಾನ ನೀಡಲು ಕೊಲೆಯಾದ ತಲಾಲ್ ಕುಟುಂಬ ಒಪ್ಪಿಗೆ!
ನಿಮಿಷಾ ಪ್ರಿಯಾ

ಕೇರಳ:ಯೆಮನ್‌ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ರಾಜ್ಯದ ನರ್ಸ್ ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ತಿಳಿಸಿದೆ. ನಿಮಿಷಪ್ರಿಯಾ ಪ್ರಕರಣದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಯೆಮನ್‌ ನ ತರೀಮ್ ಮೂಲದ ಪಂಡಿತ ಹಬೀಬ್ ಉಮರ್ ಬಿನ್ ಹಫೀಝ್ ಅವರು ನಿಯೋಜಿಸಿ,ಯೆಮನ್ ಪಂಡಿತರ ತಂಡದ ಜೊತೆಗೆ, ಉತ್ತರ ಯೆಮನ್‌ ನ ಆಡಳಿತಗಾರರು ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದ ಮಧ್ಯಸ್ಥಿಕೆ ಮಾತುಕತೆಗಳಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಕೊಲೆಯಾದ ತಲಾಲ್ ಅವರ ಕುಟುಂಬದೊಂದಿಗೆ ಮುಂದಿನ ಮಾತುಕತೆಗಳ ನಂತರ ಶಿಕ್ಷೆಗೆ ಸಂಬಂಧಿಸಿದ ಇತರ ವಿಷಯಗಳನ್ನು ನಿರ್ಧರಿಸಲಾಗುವುದು ಎಂದು ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ತಿಳಿಸಿದೆ. ಯೆಮನ್‌ ನಲ್ಲಿ ನಡೆದ ಮಧ್ಯಸ್ಥಿಕೆ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ. ನಿಮಿಷಪ್ರಿಯಾ ಅವರಿಗೆ ಕ್ಷಮಾದಾನ ನೀಡಲು, ಕೊಲೆಯಾದ ತಲಾಲ್ ಅವರ ಕುಟುಂಬ ಒಪ್ಪಿಗೆ ಒಪ್ಪಿಗೆ ಸೂಚಿಸಿದೆ ಎಂದು ಮಧ್ಯಸ್ಥಿಕೆ ವಹಿಸಿರುವವರು ತಿಳಿಸಿದ್ದಾರೆ ಎಂದು ಕೇರಳ ಪ್ರತಿಷ್ಠಿತ ಮಾಧ್ಯಮ medianoneonline.com ವರದಿ ಮಾಡಿದೆ. 

ಜುಲೈ 16 ರಂದು ನಿಗದಿಪಡಿಸಲಾಗಿದ್ದ ಮರಣದಂಡನೆಯನ್ನು, ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಮಧ್ಯಸ್ಥಿಕೆಯ ನಂತರ ಜುಲೈ 15 ರಂದು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.