ಸಿಂಗಾಪುರದಲ್ಲಿ ಸೆಕ್ಸ್ ವರ್ಕರ್ ಗಳನ್ನು ರೂಮಿಗೆ ಕರೆಸಿಕೊಂಡ ಭಾರತೀಯ ಪ್ರವಾಸಿಗರು ಮಾಡಿದ್ದೇನು?

ಸಿಂಗಾಪುರದಲ್ಲಿ ಸೆಕ್ಸ್ ವರ್ಕರ್ ಗಳನ್ನು ರೂಮಿಗೆ ಕರೆಸಿಕೊಂಡ ಭಾರತೀಯ ಪ್ರವಾಸಿಗರು ಮಾಡಿದ್ದೇನು?
uring mitigation, both men pleaded with the judge for leniency and a lighter sentence (Representational) photo credit: NDTV

ಸಿಂಗಾಪುರ: ಸಿಂಗಾಪುರದ ನ್ಯಾಯಾಲಯವು ಹೋಟೆಲ್‌ಗಳಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ದರೋಡೆ ಮಾಡಿ ಹಲ್ಲೆ ನಡೆಸಿದ ಇಬ್ಬರು ಭಾರತೀಯ ಪ್ರವಾಸಿಗರಿಗೆ ಐದು ವರ್ಷ ಮತ್ತು ಒಂದು ತಿಂಗಳ ಜೈಲು ಶಿಕ್ಷೆ ಹಾಗೂ 12 ಬೆತ್ತದ ಏಟುಗಳ ಶಿಕ್ಷೆ ವಿಧಿಸಿದೆ.

 ತಪ್ಪೊಪ್ಪಿಕೊಂಡ ಆರೋಪಿಗಳನ್ನು ಅರೋಕ್ಕಿಯಸಾಮಿ ಡೈಸನ್ (23) ಮತ್ತು ರಾಜೇಂದ್ರನ್ ಮಯಿಲರಸನ್ (27) ಎಂದು ಗುರುತಿಸಲಾಗಿದೆ. ಆರೋಪಿಗಳು ಸಂತ್ರಸ್ತರಿಗೆ ಹಲ್ಲೆ ಮಾಡಿ ದರೋಡೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ಇಬ್ಬರೂ ಭಾರತೀಯ ಪ್ರವಾಸಿಗರು ಈ ವರ್ಷದ ಏಪ್ರಿಲ್ 24 ರಂದು ಭಾರತದಿಂದ ಸಿಂಗಾಪುರಕ್ಕೆ ಆಗಮಿಸಿದ್ದರು. ಎರಡು ದಿನಗಳ ಬಳಿಕ, ಲಿಟಲ್ ಇಂಡಿಯಾ ಪ್ರದೇಶದಲ್ಲಿ ನಡೆದಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಸಂಪರ್ಕಿಸಿ ಲೈಂಗಿಕ ಸೇವೆಗಳ ಕುರಿತ ಮಾಹಿತಿ ನೀಡಿ, ಇಬ್ಬರು ಮಹಿಳೆಯರ ಸಂಪರ್ಕ ವಿವರಗಳನ್ನು ನೀಡಿದ್ದ ಎನ್ನಲಾಗಿದೆ.

 ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅರೋಕ್ಕಿಯಸಾಮಿ, ರಾಜೇಂದ್ರನ್‌ಗೆ ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೊಠಡಿಗಳಲ್ಲಿ ದರೋಡೆ ಮಾಡುವ ಯೋಚನೆ ರೂಪಿಸಾದ. ಇಬ್ಬರೂ ಅದಕ್ಕೆ ಒಪ್ಪಿಕೊಂಡು, ಆ ದಿನ ಸಂಜೆ 6 ಗಂಟೆ ವೇಳೆಗೆ ಮೊದಲ ಮಹಿಳೆಯನ್ನು ಹೋಟೆಲ್‌ ನಲ್ಲಿ ಭೇಟಿಯಾದರು. ರೂಮ್ ಒಳಗೆ ಹೋದ ನಂತರ ಆಕೆಯನ್ನು ಬಟ್ಟೆಯಿಂದ ಕೈಕಾಲುಗಳನ್ನು ಕಟ್ಟಿ, ಹಲ್ಲೆ ನಡೆಸಿ SGD 2,000 ನಗದು, ಆಭರಣಗಳು, ಪಾಸ್‌ಪೋರ್ಟ್ ಹಾಗೂ ಬ್ಯಾಂಕ್ ಕಾರ್ಡ್‌ಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 ಅದೇ ರಾತ್ರಿ 11 ಗಂಟೆ ಸುಮಾರಿಗೆ ಅವರು ಮತ್ತೊಬ್ಬ ಮಹಿಳೆಯನ್ನು ಮತ್ತೊಂದು ಹೋಟೆಲ್‌ನಲ್ಲಿ ಭೇಟಿಯಾಗಿ ಇದೇ ರೀತಿಯಲ್ಲಿ ಹಲ್ಲೆ ನಡೆಸಿ SGD 800 ನಗದು, ಎರಡು ಮೊಬೈಲ್ ಫೋನ್‌ಗಳು ಹಾಗೂ ಪಾಸ್‌ಪೋರ್ಟ್ ದೋಚಿದರು. ಅವರು ಸಂತ್ರಸ್ತೆಗೆ “ಪೊಲೀಸರಿಗೆ ತಿಳಿಸಬಾರದು” ಎಂದು ಜೀವ ಬೆದರಿಕೆ ಹಾಕಿದರು ಎನ್ನಲಾಗಿದೆ.

ಮರುದಿನ ಎರಡನೇ ಸಂತ್ರಸ್ತೆ ಈ ಘಟನೆ ಬಗ್ಗೆ ಮತ್ತೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರು ತನಿಖೆ ಆರಂಭಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

 ನ್ಯಾಯಾಲಯದ ಮುಂದೆ ಆರೋಪಿಗಳು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಹಿನ್ನೆಲೆಯನ್ನು ವಿವರಿಸಿ ಕ್ಷಮೆ ಕೋರಿ, ಕಡಿಮೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ದುಭಾಷಿಯ ಮೂಲಕ ಮಾತನಾಡಿದ ಅರೋಕ್ಕಿಯಸಾಮಿ, “ನನ್ನ ತಂದೆ ಕಳೆದ ವರ್ಷ ನಿಧನರಾದರು. ನನಗೆ ಮೂವರು ಸಹೋದರಿಯರಿದ್ದಾರೆ. ಹಣದ ಕೊರತೆಯಿಂದಲೇ ಈ ಕೃತ್ಯಕ್ಕೆ ಕೈ ಹಾಕಿದೆ,” ಎಂದು ಹೇಳಿದರೆ, ರಾಜೇಂದ್ರನ್ ತನ್ನ ಹೆಂಡತಿ ಮತ್ತು ಮಗುವು ಭಾರತದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದಾರೆಂದು ತಿಳಿಸಿದನು.

 ಸಿಂಗಾಪುರದ ಕಾನೂನು ಪ್ರಕಾರ, ದರೋಡೆ ವೇಳೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದವರಿಗೆ ಐದರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ 12 ಬೆತ್ತದ ಏಟು ವಿಧಿಸಲು ನಿಯಮವಿದೆ.