ನಾಪೋಕ್ಲು: ಕಾರು-ಆಟೋ ಮದ್ಯೆ ಸಿಲುಕಿದ ಸ್ಕೂಟಿ ಸವಾರ! ಸಿನಿಮೀಯ ರೀತಿಯ ಫೋಟೋ ಇಲ್ಲಿದೆ ನೋಡಿ👇🏻

ನಾಪೋಕ್ಲು:ಸ್ಕೂಟಿ ಚಲಾಯಿಸುತ್ತಿದ್ದ ಸವಾರನೊಬ್ಬ ಕಾರು ಮತ್ತು ಆಟೋರಿಕ್ಷಾ ನಡುವೆ ಸಿಲುಕಿದ ಪರಿಣಾಮ ಕಾಲುಗಳಿಗೆ ಗಾಯಗೊಂಡ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.ನಾಪೋಕ್ಲು ಬಳಿಯ ಬೇತು ಗ್ರಾಮದಿಂದ ಮಡಿಕೇರಿ ಕಡೆಗೆ ತೆರಳುವ ಮುಖ್ಯರಸ್ತೆಗೆ ಸಂಪರ್ಕಿಸುವ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಫಾರ್ಚೂನರ್ ಕಾರು ಹಾಗೂ ಪ್ರಯಾಣಿಕರನ್ನು ಇಳಿಸುತ್ತಿದ ಆಟೋರಿಕ್ಷಾ ನಡುವೆ ಅವಸರದಿಂದ ನುಗ್ಗಿದ ಸ್ಕೂಟಿ ಸವಾರ ಆಟೋ ಮತ್ತು ಕಾರಿನ ಮದ್ಯೆ ಸಿಲುಕಿಕೊಂಡಿದ್ದಾನೆ.ಸ್ಕೂಟಿ ಚಲಾಯಿಸುತ್ತಿದ್ದ ಸವಾರ ಅಪ್ರಾಪ್ತನೆಂದು ತಿಳಿದು ಬಂದಿದ್ದು ಅವಘಡದಿಂದ ಸವಾರನ ಕಾಲಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಅಪ್ರಾಪ್ತರ ವಾಹನ ಚಾಲನೆ ಮಿತಿಮೀರಿದ್ದು ಪೊಲೀಸರು ಕ್ರಮಕೈಗೊಳ್ಳದ ಕಾರಣ ಇಂತಹ ಪ್ರಕರಣಗಳು ಮರುಕಳಿಸುವಂತ್ತಾಗಿದೆ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಅಪ್ರಾಪ್ತರ ವಾಹನ ಚಾಲನೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
What's Your Reaction?






