MDMA ಮಾರಾಟ:ಮಡಿಕೇರಿ ನಿವಾಸಿ ಮೊಹಮ್ಮದ್ ಶರ್ಜಿಲ್ ಬಂಧನ : 3.66 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ ವಶ

ಮಡಿಕೇರಿ: ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟ ಮತ್ತು ಸರಬರಾಜು ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಮಡಿಕೇರಿ ನಗರ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41)ಎಂಬಾತ ಬಂಧನಕ್ಕೊಳಗಾಗಿದ್ದೇನೆ.ಬುಧವಾರ ದಿನ ಮಡಿಕೇರಿ ಮಹದೇವಪೇಟೆಯ ಎ.ವಿ. ಶಾಲೆಯ ಕಡೆಯಿಂದ ಅಬ್ಬಿಫಾಲ್ಸ್ ಗೆ ಹೋಗುವ ಜಂಕ್ಷನ್ ನಲ್ಲಿ ಈತ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮಾರಾಟ ಮತ್ತು ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೋಲೀಸರು ಈತನನ್ನು ಬಂಧಿಸಿ ಈತನಿಂದ 3.66 ಗ್ರಾಂ. ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಡಿಕೇರಿ ಡಿಎಸ್ಪಿ ಪಿ.ಎ. ಸೂರಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು, ಮಡಿಕೇರಿ ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನ್ನಪೂರ್ಣ ಎಸ್. ಶಂಕರಗುಳ್ಳಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.