7ನೇ ಹೊಸಕೋಟೆ: ಕಾರು ಡಿಕ್ಕಿ ಹೊಡೆದು ಉಸಿರು ಚೆಲ್ಲಿದ ಹಸು

ಸುಂಟ್ಟಿಕೊಪ್ಪ:ದನ ಕರುಗಳನ್ನು ಸಾಕುವವರ ನಿರ್ಲಕ್ಷ್ಯದಿಂದಾಗಿ ರಸ್ತೆ ನಡುವೆ ಇದ್ದ ಹಸುವೊಂದು ಅಪಘಾತಕ್ಕೆ ತುತ್ತಾಗಿ ಅಸು ನೀಗರುವ ಘಟನೆ ಭಾನುವಾರ ರಾತ್ರಿ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಕಲ್ಲು ಕೋರೆ ಜಂಕ್ಷನ್ ನಲ್ಲಿ ಈ ದುರಂತ ಸಂಭವಿಸಿದ್ದು,ರಸ್ತೆ ಮಧ್ಯದಲ್ಲಿ ಇತರೆ ಹಸುಗಳೊಂದಿಗೆ ನಿಂತಿದ್ದ ಈ ಹಸುವಿಗೆ ಸಾಗಿ ಬರುತ್ತಿದ್ದ ಕಾರು (ಇನ್ನೋವಾ) ಡಿಕ್ಕಿ ಹೊಡೆದ ಪರಿಣಾಮ ಹಸು ಸ್ಥಳ ದಲ್ಲಿಯೇ ಉಸಿರು ಚೆಲ್ಲಿದೆ. ಈ ಅನಾಹುತಕ್ಕೆ ಕಾರಣವಾಗಿರುವ ಕಾರಿಗೂ ಹಾನಿ ಉಂಟಾಗಿದೆ.
What's Your Reaction?






