ಗುತ್ತಿಗೆದಾರ ಸಂಪತ್ ಹತ್ಯೆ ಪ್ರಕರಣ: ಕಾರು ಚಾಲಕ ಸೇರಿ ಮೂವರ ಬಂಧನ:ಒಟ್ಟು ಆರು ಆರೋಪಿಗಳು ಪೊಲೀಸ್ ವಶಕ್ಕೆ

ಮಡಿಕೇರಿ:ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಗುತ್ತಿಗೆದಾರ ಸಂಪತ್ (ಶಂಭು) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಕಿರಣ್ ಮಂದಪ್ಪ, ಪಿ.ಎಂ ಗಣಪತಿ ಹಾಗೂ ಸಂಗೀತಗಳನ್ನು ಬಂಧಿಸಲಾಗಿತ್ತು.ಇದೀಗ ಸಂಪತ್ ಹತ್ಯೆಗೆ ಸಹಕರಿಸಿದ ಗಣಪತಿಯ ಸಹೋದರ ಪಿ.ಎಂ ಗೋಪಿ,ಹಾಸನ ಜಿಲ್ಲೆಯ ಕಿರಣ್ ಸಂಬಂಧಿ ರಾಜಶೇಖರ್,ಮತ್ತು ಬೆಂಗಳೂರಿನ ಕಾರು ಚಾಲಕ ಮನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಪತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದು,ಹತ್ಯೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
What's Your Reaction?






