ಹೊಸ್ಕೇರಿ; ತೋಟದ ಲೈನ್ ಮನೆಯಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆ ಮಾಡಿ ಮೃತ ದೇಹ ಸುಟ್ಟ ಪ್ರಕರಣ; ಎಂಟು ಮಂದಿ ಅರೆಸ್ಟ್

Jan 15, 2026 - 19:56
Jan 15, 2026 - 19:58
 0  4.6k
ಹೊಸ್ಕೇರಿ; ತೋಟದ ಲೈನ್ ಮನೆಯಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆ ಮಾಡಿ ಮೃತ ದೇಹ ಸುಟ್ಟ ಪ್ರಕರಣ; ಎಂಟು ಮಂದಿ ಅರೆಸ್ಟ್

ಮಡಿಕೇರಿ, ಜ 15: ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿ ಪ್ರದೇಶದ ನಿವಾಸಿಯಾದ ದೇವಯ್ಯ ರವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಬುರೋ ಎಂಬಾತನನ್ನು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕಿರುವ ಕುರಿತು ದಿನಾಂಕ: 13-01-2026 ರಂದು ದೂರು ಸ್ವೀಕರಿಸಿದ್ದು,

 ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 103(1), 238, 239, 3(5) ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಕೃತ್ಯ ನಡೆದ ಸ್ಥಳಕ್ಕೆ ಶ್ರೀ ಸೂರಜ್.ಪಿ.ಎ, ಡಿಎಸ್ಪಿ, ಮಡಿಕೇರಿ ಉಪವಿಭಾಗ, ಶ್ರೀ ಚಂದ್ರಶೇಖ‌ರ್.ಹೆಚ್.ವಿ. ಪಿಐ, ಮಡಿಕೇರಿ ಗ್ರಾಮಾಂತರ ಪೊ.ಡಾ. ಶ್ರೀ ಜವರೇಗೌಡ, ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೂ.ಠಾ & ಠಾಣಾ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಲಾಗಿರುತ್ತದೆ.

 ದಿನಾಂಕ: 11-01-2026 ರಂದು ರಾತ್ರಿ ಸಮಯದಲ್ಲಿ ಬುರೋ ಮತ್ತು ಪ್ರಶಾಂತ್ ಮುದಿ (ಬುರೋನ ಮಗ) ಮಧ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದು, ಕುಡಿದ ಮತ್ತಿನಲ್ಲಿ ಪ್ರಶಾಂತ್ ಮುದಿ ದೊಣ್ಣಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರಿಂದ ಬುರೋ ಮೃತ ಪಟ್ಟಿರುವುದು ಹಾಗೂ ಬುರೋನ ಮೃತ ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯನಾಶ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಸದರಿ ಅಪರಾಧ ಕೃತ್ಯ ನಡೆಸಿದ 08 ಜನ ಆರೋಪಿಗಳನ್ನು ದಿನಾಂಕ: 14-01-2026 ರಂದು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. ಆರೋಪಿಗಳ ವಿವರ: 1. ಪ್ರಶಾಂತ್ ಮುದಿ, 27 ವರ್ಷ, ಹೊಸ್ಕೇರಿ ಗ್ರಾಮ. 2. ದೇವಯ್ಯ,ಎಂಎಸ್, 71. ವರ್ಷ, ಹೊಸ್ಕೇರಿ ಗ್ರಾಮ. 3. ಭಾರತಿ.ಎಂ.ಡಿ, 57 ವರ್ಷ, ಹೊಸ್ಕೇರಿ ಗ್ರಾಮ. 4. ಶ್ರೀಕಾಂತ್ ಮುದಿ, 25 ವರ್ಷ, ಹೊಸ್ಕೇರಿ ಗ್ರಾಮ. 5. ಸಾಧನ್ ಮುದಿ, 50 ವರ್ಷ, ಹೊಸ್ಕೇರಿ ಗ್ರಾಮ. 6. ಲಕ್ಷ್ಮೀ ಮುದಿ, 37 ವರ್ಷ, ಹೊಸ್ಕೇರಿ ಗ್ರಾಮ. 7. ತನುಶ್ರೀ, 20 ವರ್ಷ, ಹೊಸ್ಕೇರಿ ಗ್ರಾಮ, 8)ಬಸಂತಿ ಮುದಿ. 49 ವರ್ಷ, ಹೊಸ್ಕೇರಿ ಗ್ರಾಮ.

What's Your Reaction?

Like Like 5
Dislike Dislike 1
Love Love 1
Funny Funny 0
Angry Angry 2
Sad Sad 4
Wow Wow 1