ಫುಟ್ಬಾಲ್ ತೀರ್ಪುಗಾರಿಕೆಯಲ್ಲಿ ತಾರತಮ್ಯ ಆರೋಪ: ಮೈದಾನ ಬಿಟ್ಟು ತೆರಳಿದ ಆಟಗಾರರು

Apr 21, 2025 - 22:41
 0  207
ಫುಟ್ಬಾಲ್ ತೀರ್ಪುಗಾರಿಕೆಯಲ್ಲಿ ತಾರತಮ್ಯ ಆರೋಪ: ಮೈದಾನ ಬಿಟ್ಟು ತೆರಳಿದ ಆಟಗಾರರು

ವರದಿ:ಕಿಶೋರ್ ಕುಮಾರ್ ಶೆಟ್ಟಿ

ವಿರಾಜಪೇಟೆ(ಕೊಡಗು):ಪಂದ್ಯಾಟದಲ್ಲಿ ಆಟಗಾರರು ಆಟದ ಮಧ್ಯೆ ತೋರಿಸುವ ಪ್ರದರ್ಶನ ಮತ್ತು ಕೆಲವು ಆಟಗಾರರು ಅತಿರೇಕದಿಂದ ಆಟವಾಡುವುದು ಸಹಜ.ಆದರೆ ತೀರ್ಪುಗಾರರು ಸರಿಯಾದ ಸಮಯದಲ್ಲಿ ಆಟಗಾರರಿಗೆ ತಪ್ಪನ್ನು ಮನದಟ್ಟು ಮಾಡಿ ಶಿಕ್ಷೆಗೆ ಗುರಿಯಾಗಿಸಬೇಕು ಇಲ್ಲದಿದ್ದರೆ,ಪಂದ್ಯಾವಳಿಯಲ್ಲಿ ಗೊಂದಲಗಳು ಸೃಷ್ಟಿಯಾಗುವುದು ಖಂಡಿತ.

ಇದಕ್ಕೆ ಸ್ಪಷ್ಟ ಉದಾಹರಣೆ ಹಿಂದೂ ಮಲಯಾಳಿ ಅಸೋಸಿಯೇಷನ್ ವಿರಾಜಪೇಟೆ ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ಅಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾಟ ದಲ್ಲಿ ಎರಡನೆಯ ದಿನದ ಪಂದ್ಯಾಟದಲ್ಲಿ ಮೂರನೇ ಪಂದ್ಯಾಟವು ಗಲಭೆಗೆ ಕಾರಣವಾಗಿದೆ. ಕಲ್ಲು ಬಾಯ್ಸ್ ವಿರಾಜಪೇಟೆ ಮತ್ತು ವಿದೇಶಿ ಆಟಗಾರರನ್ನು ಒಳಗೊಂಡ ಜಿ.ಡಿ. ಕ್ಲಬ್ ಕಣ್ಣೂರು ತಂಡಗಳ ಮಧ್ಯೆ ಪಂದ್ಯ ನಡೆಯಿತು. ಈ ವೇಳೆಯಲ್ಲಿ ಪ್ರಥಮಾರ್ಧ ಪಂದ್ಯದಲ್ಲಿ 03-02 ಗೋಲುಗಳು ದಾಖಲಾಗಿತ್ತು. ದ್ವೀತಿಯಾರ್ಧ ಕಳೆದು ಕೊನೆ ಹಂತದ ಎರಡು ನಿಮಿಷಗಳು ಮಾತ್ರ ಪಂದ್ಯಾಟ ಮುಕ್ತಾಯಗೊಳ್ಳಲು ಬಾಕಿ ಉಳಿದಿತ್ತು. ಕಣ್ಣೂರು ತಂಡದ ಆಟಗಾರನಿಗೆ ಕಲ್ಲು ಬಾಯ್ಸ್ ತಂಡದ ಆಟಗಾರ ಕೈಯಿಂದ ತಳ್ಳಿದ ಪರಿಣಾಮ ತೀರ್ಪುಗಾರರಿಗೆ ತಪ್ಪು ಎಂದು ಮನವಿ ಮಾಡಿದ್ದಾರೆ. ತೀರ್ಪು ನೀಡಲು ತೀರ್ಪುಗಾರರು ಮರೆತಿದ್ದಾರೆ ಎಂದು ಆಟಗಾರರು ಆರೋಪಿಸಿದ್ದಾರೆ .ಕ್ಷಣ ಮಾತ್ರದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಕಾದಾಟ ಆರಂಭವಾಯಿತು. ಪ್ರೇಕ್ಷಕರು ಮೈದಾನದೊಳಗೆ ನುಗ್ಗಿ ದಾಂಧಲೆ ನಡೆಸಿದರು.ಕೆಲವು ಸಮಯದ ವರೆಗೆ ಪಂದ್ಯಾಟವು ಸ್ಥಗಿತಗೊಂಡಿತು.

ತೀರ್ಪುಗಾರರ ವೈಫಲ್ಯ ಎದ್ದು ಕಂಡಿತು. ವಿದೇಶಿ ಆಟಗಾರರು ಮನವಿ ಮಾಡಿದರು ಒಲ್ಲೆ ಎಂದಿದ್ದಾರೆ. ತೀರ್ಪುಗಾರರ ವಿರುದ್ಧ ರೊಚಿಗೆದ್ದ ಕ್ರೀಡಾ ವೀಕ್ಷಕರು ನಡುವೆ ವಾದವಿವಾದಗಳು ಸೃಷ್ಟಿಯಾಗಿ ಗೊಂದಲದ ವಾತಾವರಣ ನಡೆಯಿತು. ಬಳಿಕ ಆಯೋಜಕರು ಹಾಗೂ ತೀರ್ಪುಗಾರರ ನಿರ್ಣಯದಂತೆ ಕಲ್ಲು ಬಾಯ್ಸ್ ತಂಡ ವಿಜಯಿ ಎಂದು ಘೋಷಣೆ ಮಾಡಲಾಯಿತು. ವಿರಾಜಪೇಟೆ ಮೈದಾನದಲ್ಲಿ ನಡೆದಿರುವ ಕಾಲ್ಚೆಂಡು ಪಂದ್ಯಾವಳಿಗಳ ಇತಿಹಾಸದಲ್ಲೇ ಇದು ಪ್ರಥಮ ಸಾರ್ವಜನಿಕರು ದೂರಿದ್ದಾರೆ.

What's Your Reaction?

Like Like 2
Dislike Dislike 1
Love Love 1
Funny Funny 0
Angry Angry 1
Sad Sad 1
Wow Wow 0