ಉಗ್ರವಾದ ಅಳಿಸೋಣ ಮಾನವೀಯತೆ ಹರಡೋಣ: ಪಹಲ್ಗಾಮ್ ಭಯೋತ್ಪಾದಕ ದಾಳಿ: ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಖಂಡನೆ
ಮಡಿಕೇರಿ: ಭಯೋತ್ಪಾದನೆ ಮಾನವರ ಘನತೆಗೆ ಅಪಮಾನವಾಗಿದೆ.ಭಯೋತ್ಪಾದಕರಿಗೆ ಧರ್ಮವಿಲ್ಲ.ಯಾವ ಧರ್ಮವೂ ಕೂಡ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದಿಲ್ಲ.ಎಲ್ಲಾ ಧರ್ಮಗಳು ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸುತ್ತದೆ.ಜಮ್ಮ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿ, ದಾಳಿಯಲ್ಲಿ ಬಲಿಯಾದವರಿಗೆ ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,ಪ್ರತಿಯೊಬ್ಬ ವ್ಯಕ್ತಿತ್ವವೂ ವಿಶೇಷವಾದದ್ದು,ಎಲ್ಲರೂ,ನಾವೆಲ್ಲರೂ ಸಮಾನ ಮೌಲ್ಯವನ್ನು ಹೊಂದಿದ್ದೇವೆ. ಬ್ಬರಿಗೊಬ್ಬರು ಊರುಗೋಲಾಗುವುದೇ ಮನುಷ್ಯ ಧರ್ಮ.ರಕ್ತಪಿಪಾಸುಗಳಿಗೆ ಮಾನವೀಯ ಧರ್ಮ ಬೇಕಾಗಿಲ್ಲ, ಸಾವೊಂದೇ ಗುರಿ.ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ರಕ್ತಪಿಪಾಸುಗಳ ದಾಳಿಗೆ ಬಲಿಯಾದ ಭಾರತೀಯ ಬಂಧುಗಳಿಗೆ ಒಂದು ಹನಿ ಕಣ್ಣೀರು ಸುರಿಸೋಣ.
ಅವರ ಕುಟುಂಬದ ನೋವಿನಲ್ಲಿ ನಾವೂ ಭಾಗಿಯಾಗೋಣ.ಭಯೋತ್ಪಾನೆ ವಿರುದ್ಧ ಎಲ್ಲರೂ ಎದ್ದು ನಿಂತು ಭಾರತಾಂಬೆಯ ಹೆಸರು ಎತ್ತಿ ಹಿಡಿಯೋಣ.ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡೋಣ.ಭಯೋತ್ಪಾದನೆ ಅಳಿಯಲಿ ಮನುಷ್ಯ ಪ್ರೀತಿ ಅರಳಲಿ ಎಂದು ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ (ಮುಸ್ತು) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.