ಆಂಬ್ಯುಲೆನ್ಸ್ ವಾಹನದ ಹಿಂದಿನ ಚಕ್ರ ಬ್ಲಾಕ್! ಬ್ರೇಕ್ ಫೇಲ್! | ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಿದ ವಾಹನ ಚಾಲಕ!

ಮಡಿಕೇರಿ:-ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನು ಕರೆದೊಯ್ಯುವಾಗ ವಾಹನದ ಹಿಂದಿನ ಚಕ್ರ ಬ್ಲಾಕ್ ಆಗಿ 6 ಕಿ.ಮೀ. ದೂರದಲ್ಲಿ ಬ್ರೇಕ್ ಫೇಲ್ ಆಗಿತ್ತು. ತಮ್ಮ ಜೀವವನ್ನು ಲೆಕ್ಕಿಸದೆ ಆ ಮಹಿಳೆಯನ್ನು ಬೆಂಗಳೂರಿನ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ..ಹಾಗೆ ಹಿಂತಿರುಗಿ ಬರುವ ದಾರಿಯಲ್ಲಿ ರೋಡ್ ಆಕ್ಸಿಡೆಂಟ್ ಹೆಡ್ ಇಂಜ್ಯೂರಿ ಆಗಿ ಅನಿವಾರ್ಯವಿದ್ದ ಕಾರಣ ಅದೇ ಬ್ರೆಕ್ ಸರಿ ಇಲ್ಲದ ವಾಹನದಲ್ಲಿ ರೋಗಿಯನ್ನು ಬಿಳಿಕೆರೆ ಇಂದ ಮತ್ತೆ ಹುಣಸೂರು ಆಸ್ಪತ್ರೆಗೆ ತಲುಪಿಸಿರುತ್ತಾರೆ.
ಈ ಕಾರಣಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಬುಲೆನ್ಸ್ ವಾಹನ ಚಾಲಕರಾದ ಬಿ. ಎಸ್. ವೆಂಕಟೇಶ್ ( ಕಿಶೋರ್ ಪೂಜಾರಿ) ರವರಿಗೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೋವಿಡ್ ಆರಂಭದ ದಿನಗಳಿಂದಲೂ ಕೂಡ ಕೋವಿಡ್ ಅಂತ್ಯಸಂಸ್ಕಾರದಲ್ಲಿ ಪ್ರಮುಖಪಾತ್ರವಹಿಸಿ ಜೀವರಕ್ಷಕನಿಗೆ ಇರಬೇಕಾದ ಸಾಮಾಜಿಕ ಕಳಕಳಿ/ಬದ್ಧತೆಗೆ ಇಡೀ ಜಿಲ್ಲಾಸ್ಪತ್ರೆಗೆ ಮಾದರಿಯಾಗಿದ್ದಾರೆ. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ರೋಗಿಗಳಿಗೆ ತಕ್ಷಣಕ್ಕೆ ಸಿಗಬಲ್ಲ ಮತ್ತು ರೋಗಿಗಳ ಬಗ್ಗೆ ಅತೀವ ಕಾಳಜಿಯುಳ್ಳಂತಹ ನಿಮ್ಮಂತಹ ಸಮಾಜಮುಖಿ ಮನಸ್ಸುಗಳು ಮತ್ತಷ್ಟು ಹೆಮ್ಮರವಾಗಲಿ ಅಂತ ಜಿಲ್ಲೆಯ ಜನರು ಆಶಿಸುತ್ತಿದ್ದಾರೆ.
ವರದಿ:ಅರ್ಜುನ್ ಮಡಿಕೇರಿ