ಪೊನ್ನಂಪೇಟೆ; ಚಿನ್ನಾಭರಣ ಕಳವು ಯುವಕರ ಬಂಧನ

Mar 16, 2026 - 20:48
 0  2.2k
ಪೊನ್ನಂಪೇಟೆ; ಚಿನ್ನಾಭರಣ ಕಳವು ಯುವಕರ ಬಂಧನ

ಪೊನ್ನಂಪೇಟೆ;ಪೊಲೀಸ್ ಠಾಣಾ ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿನ ಆದೇಂಗಡ ಕುಟುಂಬದ ಐನ್ ಮನೆಯಲ್ಲಿ ಪೊನ್ನಪ್ಪ ಸಂತೆಯ ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಪಾರಂಪರಿಕ ಚಿನ್ನ & ಬೆಳ್ಳಿಯ ಆಭರಣಗಳು ಅದೇಂಗದ ಕುಟುಂಬಸ್ಥರ ಸುಪರ್ದಿಯಲ್ಲಿದ್ದು, ದಿನಾಂಕ: 23-02-2026 ರಂದು ಸದರಿ ಐನ್ಮನೆಯಲ್ಲಿಟ್ಟಿದ್ದ ಅಂದಾಜು 40 ಗ್ರಾ ಚಿನ್ನ & 2.5 ಕೆ.ಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಪೊನ್ನಂಪೇಟೆ ಪೊಲೀಸ್ ಹಾಗೂ ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಅಪರಾಧ ಕೃತ್ಯ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಳ್ಳಲಾಗಿರುತ್ತದೆ.

 ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಆರೋಪಿಗಳ ವಿವರ: ಕ್ಯಾಲಿ ಕುಟ್ಟಪ್ಪ.ವಿ.ಎ 3 ಕರಣ್, 19 ವರ್ಷ, ಸುಳುಗೋಡು, ಬಿಳೂರು ಗ್ರಾ. ಪೊನ್ನಂಪೇಟೆ ತಾ| 2) ವಿ.ಎಸ್ ಯಶ್ವಂತ್, 20 ವರ್ಷ, ಹಾತೂರು ಗ್ರಾಮ, ಪೊನ್ನಂಪೇಟೆ ತಾ|| 3) ವರ್ಷನ್ ವೈ, 19 ವರ್ಷ, ತೇಜೂರು ಗ್ರಾಮ, ಹಾಸನ ತಾ & ಜಿಲ್ಲೆ, 4) ಶ್ರೇಯಸ್‌ ಡಿ, 24 ವರ್ಷ, CFTRI ಲೇಔಟ್, ಬೋಗಾದಿ, ಮೈಸೂರು, ವಶಪಡಿಸಿಕೊಂಡ ಸ್ವತ್ತುಗಳ ವಿವರ, ដក 50,700/- 2.422 82 3 5.5 ಗ್ರಾಂ ಚಿನ್ನ ದ್ವಿಚಕ್ರ ವಾಹನ ಹಾಗೂ 04 ಮೊಬೈಲ್‌ಗಳು

What's Your Reaction?

Like Like 3
Dislike Dislike 4
Love Love 5
Funny Funny 1
Angry Angry 2
Sad Sad 1
Wow Wow 1