ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಾಗಲಕೋಟೆ ಮೂಲದ ಲೈನ್‌ಮ್ಯಾನ್ ಸಾವು

ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಾಗಲಕೋಟೆ ಮೂಲದ ಲೈನ್‌ಮ್ಯಾನ್ ಸಾವು
ಬಾಗಲಕೋಟೆ ಮೂಲದ ವಿದ್ಯುತ್ ಲೈನ್ ಮ್ಯಾನ್ ಪ್ರವೀಣ್

ಚಿಕ್ಕಮಗಳೂರು: ವಿದ್ಯುತ್ ಲೈನ್ ದುರಸ್ತಿ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಾಗಲಕೋಟೆ ಮೂಲದ ಲೈನ್‌ಮ್ಯಾನ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೊನ್ನೆಕೊಪ್ಪ ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ. ಬಾಗಲಕೋಟೆ ಮೂಲದ ಪ್ರವೀಣ್(26) ಮೃತ ಲೈನ್‌ಮ್ಯಾನ್ ಆಗಿದ್ದು, ಹಾಳಾಗಿದ್ದ ವಿದ್ಯುತ್ ಲೈನ್ ದುರಸ್ತಿ ಮಾಡಿ ನಂತರ ವಿದ್ಯುತ್ ಕಂಬ ಹತ್ತಿ ಪ್ಯೂಸ್ ಹಾಕಲು ಮುಂದಾಗಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಶಾಕ್‌ನಿಂದ ನೆಲಕ್ಕೆ ಬಿದ್ದು ಅಸ್ವಸ್ಥಗೊಂಡಿದ್ದ ಪ್ರವೀಣ್‌ನನ್ನು ಇತರ ಲೈನ್‌ಮ್ಯಾನ್‌ಗಳು, ಸಾರ್ವಜನಿಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯೆ ಪ್ರವೀಣ್ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಪ್ರವೀಣ್ ಕಳೆದ ಒಂದು ತಿಂಗಳ ಹಿಂದೆ ವಿವಾಹವಾಗಿದ್ದು, ಪತ್ನಿಯನ್ನು ಅಗಲಿದ್ದಾರೆ.