ಭಾಗಮಂಡಲ:ಶ್ರೀ ಕಾವೇರಮ್ಮ ಚಾರಿಟೇಬಲ್ ಟ್ರಸ್ಟ್ ಜಾಗ ಪರಿಶೀಲನೆ ನಡೆಸಿದ ಶಾಸಕ ಎಎಸ್ ಪೊನ್ನಣ್ಣ
ಭಾಗಮಂಡಲದಲ್ಲಿರುವ ಶ್ರೀ ಕಾವೇರಮ್ಮ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಕೊಡವ ಗೆ ಸಂಬಂಧಿಸಿದ ಜಾಗದ ವೀಕ್ಷಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರುಮಾಡಿದರು. ಶ್ರೀ ಕಾವೇರಮ್ಮ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಜಾಗ ಈ ಕ್ಷೇತ್ರದಲ್ಲಿ ಇದ್ದು, ಅಧಿಕಾರಿಗಳೊಂದಿಗೆ ಅಲ್ಲಿಗೆ ತೆರಳಿದ ಶಾಸಕರು ಸ್ಥಳದ ವೀಕ್ಷಣೆಯನ್ನು ಕೈಗೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿದರು.
