ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ:ಚನ್ನಪಟ್ಟಣ ಮೂಲದ ಶರತ್ ವಿರುದ್ಧ ಪ್ರಕರಣ ದಾಖಲು

ಸಾಮಾಜಿಕ ಜಾಲತಾಣದಲ್ಲಿ  ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ:ಚನ್ನಪಟ್ಟಣ ಮೂಲದ ಶರತ್ ವಿರುದ್ಧ ಪ್ರಕರಣ ದಾಖಲು
ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ: ವಿರಾಜಪೇಟೆ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದ ಬಳಕೆ ಹಿನ್ನೆಲೆ, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 296 ಪ್ರಕಾರ ಚನ್ನಪಟ್ಟಣ ಮೂಲದ ಶರತ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಡಿಕೇರಿ ವಕೀಲ ಪವನ್ ಪೆಮ್ಮಯ್ಯ ಅವರಿಂದ ದೂರು ನೀಡಿದ್ದಾರೆ. ಆರೋಪಿ ಪತ್ತೆಗೆ ಪೋಲೀಸರಿಂದ ತನಿಖೆ ಚುರುಕುಗೊಳಿಸಲಾಗಿದೆ.