ರಾಜ್ಯ ವಿಧಾನ ಮಂಡಲದ ಸದನಗಳ "ಮುಂಗಾರು ಅಧಿವೇಶನದ" ದಿನಾಂಕ ಪ್ರಕಟ! ಇಲ್ಲಿದೆ ನೋಡಿ👇🏻

ರಾಜ್ಯ ವಿಧಾನ ಮಂಡಲದ  ಸದನಗಳ "ಮುಂಗಾರು ಅಧಿವೇಶನದ" ದಿನಾಂಕ ಪ್ರಕಟ!  ಇಲ್ಲಿದೆ  ನೋಡಿ👇🏻
ವಿಧಾನಸೌಧ

ಬೆಂಗಳೂರು: ರಾಜ್ಯ ವಿಧಾನ ಮಂಡಲ ಉಭಯ ಸದನಗಳ ‘ಮುಂಗಾರು ಅಧಿವೇಶನ’ವು ಆಗಸ್ಟ್ 11ರಿಂದ 22ರ ವರೆಗೆ ನಡೆಯಲಿದೆ. ಶುಕ್ರವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಂಬಂಧ ರಾಜ್ಯಪತ್ರವನ್ನು ಪ್ರಕಟಿಸಿದ್ದು, ಆಗಸ್ಟ್ 11ರ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಸಮಾವೇಶಗೊಳ್ಳಲಿದೆ ಎಂದು ಆದೇಶ ಹೊರಡಿಸಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಶನಿವಾರ ಮತ್ತು ರವಿವಾರ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು ಒಟ್ಟು 9 ದಿನಗಳ ಕಾಲ ಅಧಿವೇಶನ ಕಲಾಪ ನಡೆಯಲಿದೆ.