ಕಾಡಾನೆ ದಾಳಿಗೆ ರೈತ ಬಲಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಎನ್ ಆರ್ ಪುರ ತಾಲೂಕೀನ ಬಾಳೆಹೊನ್ನೂರು ಸಮೀಪದ ಬನ್ನೂರು ಎಂಬಲ್ಲಿ ರೈತ ಸುಬ್ಬೇಗೌಡ ಎಂಬವರು ಕಾಡಾನೆಗೆ ದಾಳಿಗೆ ಭಾನುವಾರ ಬಲಿಯಾಗಿದ್ದಾರೆ. ಗ್ರಾಮ ಸಮೀಪದ ತಮ್ಮ ತೋಟಕ್ಕೆ ಹೋಗಿದ್ದ ವೇಳೆ ತೋಟದಲ್ಲೇ ಇದ್ದ ಕಾಡಾನೆ ಏಕಾಏಕಿ ಸುಬ್ಬೇಗೌಡರ ಮೇಲೆ ದಾಳಿಮಾಡಿದೆ. ಕಾಡಾನೆ ರೈತನನ್ನು ಕಾಲಿನಿಂದ ತುಳಿದುಬಹಾಕಿದ್ದು, ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.