ಹಾಸನ: ಮಗ ಮಾಡಿದ್ದ ಸಾಲ ತೀರಿಸುವಂತೆ ಬ್ಯಾಂಕ್ ನವರು ಪದೆ ಪದೇ ಮನೆಗೆ ಬರುತ್ತಿದ್ದನ್ನು ನೋಡಿ ಜಿಗುಪ್ಸೆಗೊಂಡು ತಾಯಿ ಆತ್ಮಹತ್ಯೆ

ಹಾಸನ: ಮಗ ಮಾಡಿದ ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿ ಪದೆ ಪದೇ ಮನೆಗೆ ಬಂದಿದ್ದರಿಂದ ಮನನೊಂದ ತಾಯಿ ವಿಷ ಸೇವಿಸಿ ಆತಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹನಿಕೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದ್ರಾಕ್ಷಾಯಿಣಿ (55) ಮೃತರು. ಪುತ್ರ ಯತೀಶ್ ಚಿಕ್ಕಮಗಳೂರಿನ ಐಡಿಎಫ್‌ಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದ. ಬ್ಯಾಂಕ್ ಸಿಬ್ಬಂದಿ ಪ್ರತಿದಿನ ಮನೆಗೆ ಬಂದು ಸಾಲ ಪಾವತಿಸುವಂತೆ ಒತ್ತಾಯ ಮಾಡುತ್ತಿದ್ದರು. ಅದರಿಂದ ಮನನೊಂದ ದ್ರಾಕ್ಷಾಯಿಣಿ ಜು. 31ರ ರಾತ್ರಿ 11 ಗಂಟೆ ಸಮಯದಲ್ಲಿ ವಿಷ ಸೇವಿಸಿದ್ದರು. ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹಿಮ್ಸ್ ಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.