ಮೈಸೂರು:ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ನಿಂದ ಛಾಯಾಗ್ರಾಹಕರಿಂದ ಸುದ್ದಿ ಛಾಯಾಚಿತ್ರಗಳ ಆಹ್ವಾನ

ಮೈಸೂರು:ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ 2025-26 ನೇ ಸಾಲಿನ ದಸರಾ ಮಹೋತ್ಸವ ಪ್ರಯುಕ್ತ ರಾಜ್ಯಮಟ್ಟದ ಪತ್ರಿಕಾ ಛಾಯಾಗ್ರಾಹಕರಿಗೆ ಸುದ್ದಿ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಕರ್ನಾಟಕದಾದ್ಯಂತ ರಾಜ್ಯ ಹಾಗೂ ಸ್ಥಳೀಯ ಮಟ್ಟದ ಪತ್ರಿಕಾ ಕಚೇರಿಯಲ್ಲಿ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಹಾಗೂ ಪತ್ರಿಕೆಗಳ ಹವ್ಯಾಸಿ ಸುದ್ದಿ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಬಹುಮಾನ 25,000 (ಇಪ್ಪತ್ತೈದು ಸಾವಿರ ರೂ.) ದ್ವಿತೀಯ 15.000 (ಹದಿನೈದು ಸಾವಿರ ರೂ. ತೃತೀಯ ಬಹುಮಾನ 10.000 (ಹತ್ತು ಸಾವಿರ) ರೂ.! ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸುದ್ದಿ ಛಾಯಾಗ್ರಾಹಕ ದಿ.ನೇತ್ರರಾಜು ಅವರ ಸ್ಮರಣಾರ್ಥ 5 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ನಿಬಂಧನೆಗಳು:
ಛಾಯಾಗ್ರಾಹಕರು ಕೆಲಸ ನಿರ್ವಹಿಸುವ ಪತ್ರಿಕೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು, ಛಾಯಾಗ್ರಾಹಕರು ತಾವೇ ತೆಗೆದಿರುವ ಸುದ್ದಿ ಛಾಯಾಚಿತ್ರವಾಗಿರಬೇಕು, ಛಾಯಾಗ್ರಹಕರು ತಾವು ತೆಗೆದ ಒಂದು ಸುದ್ದಿ ಛಾಯಾಚಿತ್ರವನ್ನು (https://forms.gle/4HKyzZX5136io3ZK7 ) ಇ-ಲಿಂಕ್ ಮೂಲಕ ಛಾಯಾಚಿತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸ್ವವಿವರಗಳೊಂದಿಗೆ ನಿಗದಿತ ಅರ್ಜಿಯಲ್ಲಿ ಭರ್ತಿ ಮಾಡಿ ಕಳುಹಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು 98868 62504 ಈ ಸಂಖ್ಯೆಗೆ ಜಿಪೇ ಮೂಲಕ 200 ರೂ. ಪ್ರವೇಶ ಶುಲ್ಕ ಪಾವತಿಸಬೇಕು.
ಸ್ಪರ್ಧೆಗೆ ಭಾಗವಹಿಸುವ ಛಾಯಾಗ್ರಹಕರು ಕಡ್ಡಾಯವಾಗಿ 01-07-2023 ರಿಂದ 30-06-2025 ರೊಳಗೆ ತೆಗೆದ ಛಾಯಾಚಿತ್ರವಾಗಿರಬೇಕು. 6. ಛಾಯಾಚಿತ್ರ ಕಳುಹಿಸಲು ಅಗಸ್ಟ್ 10 ರಂದು ಕೊನೆಯ ದಿನಾಂಕ ನಂತರ ಬಂದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಗತಿ ಗೋಪಾಲಕೃಷ್ಣ 9448044235, ಲಕ್ಷ್ಮೀನಾರಾಯಣ ಯಾದವ್ 9845337667, ಎಸ್ ಆರ್ ಮಧುಸೂದನ್ 9448569867, ನಂದನ್ ಎ 9886862504 ಇವರ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆಯಲು ಅವಕಾಶವಿರುತ್ತದೆ.