ತಾಯಿಗೆ ಮಲ ತಂದೆ ‘ತಲಾಖ್’ ನೀಡಿದ ನೋವು; ಯುವಕ ಆತ್ಮಹತ್ಯೆ

ತಾಯಿಗೆ ಮಲ ತಂದೆ ‘ತಲಾಖ್’ ನೀಡಿದ ನೋವು; ಯುವಕ ಆತ್ಮಹತ್ಯೆ

ಕೋಲಾರ, ಡಿ. 10: ತಾಯಿಗೆ ಮಲ ತಂದೆಯೇ ತ್ರಿವಳಿ ತಲಾಖ್ ನೀಡಿ ಬೇರೆ ಮದುವೆಯಾಗಿದ್ದರಿಂದ ಮನನೊಂದು 25 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಳಬಾಗಿಲು ನಗರದ ರೆಹಮತ್ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಅಫ್ನಾನ್‌ (25) ಎಂಬ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣತ್ಯಾಗ ಮಾಡಿದ್ದಾನೆ.

ಪೊಲೀಸರ ಪ್ರಕಾರ, ಅಫ್ನಾನ್‌ ತಾಯಿ ಜಬೀನ್ ತಾಜ್‌ ಅವರಿಗೆ ಮಲ ತಂದೆ ಅಕ್ಬರ್ ಅಲಿ ತಲಾಖ್ ನೀಡಿದ್ದು, ಬಳಿಕ ಮತ್ತೊಂದು ಮದುವೆ ಮಾಡಿಕೊಂಡಿದ್ದರು. ಈ ಘಟನೆ ಅಫ್ನಾನ್‌ನ ಮನಸ್ಸಿಗೆ ದೊಡ್ಡ ಆಘಾತವಾಗಿದ್ದು, ಸಂಬಂಧಿಕರೊಂದಿಗೆ ಈ ವಿಚಾರವಾಗಿ ಹಲವು ಬಾರಿ ವಾಗ್ವಾದವೂ ನಡೆದಿದೆ. ಕಳೆದ ಕೆಲವು ದಿನಗಳಿಂದ ಮಾನಸಿಕ ಒತ್ತಡದಲ್ಲಿದ್ದ ಆತ, ಕೊನೆಗೆ ತೀವ್ರ ಮನೋವ್ಯಥೆಗೆ ಒಳಗಾಗಿ ಈ ಆತ್ಮಹತ್ಯೆ ಹೆಜ್ಜೆ ಇಟ್ಟಿದ್ದಾನೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಳಬಾಗಿಲು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ.