ಚನ್ನಪಟ್ಟಣ ಬಳಿ ರಸ್ತೆ ಅಪಘಾತ:ಕೊಡಗಿನ ದಂಪತಿಗಳು ಸ್ಥಳದಲ್ಲೇ ದುರ್ಮರಣ

ರಾಮನಗರ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಚನ್ನಪಟ್ಟಣ ಬಳಿ ಕಾರು ಹಾಗೂ ಕಂಟೇನರ್ ನಡುವೆ ಅಪಘಾತ ಸಂಭವಿಸಿ ಕೊಡಗಿನ ಪೊನ್ನಂಪೇಟೆ ಸಮೀಪದ ಪೂಕೊಳ ನಿವಾಸಿಗಳಾದ ಪತಿ ಹಾಗೂ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕಾಳಿಮಾಡ ಸೋಮಯ್ಯ ಹಾಗೂ ಸರಸು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸೋಮಯ್ಯ ಹಾಗೂ ಸರಸು ಅವರ ಮಗ ಸಜನ್ ಸೋಮಯ್ಯ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಸಜನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಶ್ವಾನ ಅಚ್ಚರಿಯಾಗಿ ಬದುಕುಳಿದಿದೆ ಎಂದು ಮಾರ್ಗ ಮಧ್ಯದಲ್ಲಿದ್ದ ಮಡಿಕೇರಿ ನಗರ ನಿವಾಸಿ ಚಂದ್ರಶೇಖರ್ ಅವರು ಕೂರ್ಗ್ ಡೈಲಿಗೆ ಮಾಹಿತಿ ನೀಡಿದ್ದಾರೆ.