ಕಾಡಾನೆ ದಾಳಿಗೆ ಯುವತಿ ಬಲಿ

ಚಿಕ್ಕಮಗಳೂರು : ಜಿಲ್ಲೆಯ ಎನ್. ಆರ್.ಪುರ ಸಮೀಪದ ಬನ್ನೂರು ಗ್ರಾಮದ ಬಳಿ ಆನೆ ದಾಳಿಗೆ ಯುವತಿ ಸಾವಪ್ಪಿದ ಘಟನೆ ನಡೆದಿದೆ. ಹೊನ್ನಳ್ಳಿ ಮೂಲದ ಅನಿತಾ (25) ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರು ಇವರಾಗಿದ್ದು,ಅಲ್ಲಿನ ತೋಟದ ಸಾಲು ಮನೆಗಳಲ್ಲಿ ವಾಸವಾಗಿದ್ದರು . ಕಳೆದ ರಾತ್ರಿ 9 ಗಂಟೆಗೆ ಮನೆಗೆ ಹೋಗುವಾಗ ಆನೆ ದಾಳಿ ಮಾಡಿದೆ. ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಹೋಗುವಾಗ ಮಾರ್ಗ ಮಧ್ಯೆ ಸಾವಪ್ಪಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು.ಮೃತರಿಗೆ ಕಾನೂನು ಪ್ರಕಾರ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ.
ಇತ್ತೀಚೆಗೆ ಆನೆ ದಾಳಿಯಲ್ಲಿ ಈ ಭಾಗದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಹಿಡಿದು ತಂದು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ ಸಾಕಷ್ಟು ಆನೆಗಳನ್ನು ತಂದು ಬಿಟ್ಟು ಅವು ಗ್ರಾಮಗಳತ್ತ ಬರುತ್ತಿವೆ. ಈ ಹಿಂದೆ ಈ ಭಾಗದಲ್ಲಿ ಆನೆಗಳ ಸಮಸ್ಯೆ ಇರಲಿಲ್ಲ.ಅದರಲ್ಲೂ ಜನರ ಮೇಲೆ ದಾಳಿ ಮಾಡಿರುವುದು ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.