ಎಕೆಎಸ್ ಲೀಗಲ್ ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾವಳಿ
ಬೆಂಗಳೂರು:ಇಲ್ಲಿನ ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಎ.ಕೆ.ಎಸ್ ಲೀಗಲ್ ಹಾಗೂ ರೇ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ, "ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾಟ" ಬೆಂಗಳೂರಿನಲ್ಲಿ ಜರಗಿತು.ಪಂದ್ಯಾಟವನ್ನು ಉದ್ಘಾಟಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ್ ಕುಮಾರ್ ರವರು ಆಗಮಿಸಿದ್ದರು. ಸುಮಾರು 40ಕ್ಕೂ ಅಧಿಕ ಕಾನೂನು ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಎ.ಕೆ.ಎಸ್ ಲೀಗಲ್ ಸಂಸ್ಥೆಯ ಸ್ಥಾಪಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಉಪಸ್ಥಿತರಿದ್ದರು.
