ಎಣ್ಣೆ ಪಾರ್ಟಿಯಲ್ಲಿ ಪತ್ನಿಯೊಂದಿಗೆ ಸಲುಗೆ; ಗೆಳೆಯನ ಮೇಲೆ ಪತಿಯಿಂದ ಮಚ್ಚಿನಿಂದ ದಾಳಿ
ಶಿವಮೊಗ್ಗ, ಡಿ. 12: ತಾಲೂಕಿನ ಬನ್ನಿಕೆರೆ ಗ್ರಾಮದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಘಟನೆ ಸ್ನೇಹದ ಹೆಸರನ್ನೇ ಕೆಡಿಸಾದೆ. ಪತ್ನಿಯೊಂದಿಗೆ ಸಲುಗೆಯಲ್ಲಿ ತೊಡಗಿದ್ದ ಸ್ನೇಹಿತನನ್ನು ಕಣ್ಣಾರೆ ಕಂಡ ಪತಿ, ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ಬೆಳಕಿಗೆ ಬಂದಿದೆ.
ಶಿವು ನಾಯ್ಕ್ ಮತ್ತು ಹರೀಶ್ ನಾಯ್ಕ್—ಇಬ್ಬರೂ ಆಪ್ತರು. ಪ್ರತಿದಿನ ಕೆಲಸ ಮುಗಿದ ಬಳಿಕ ಸೇರಿ ಎಣ್ಣೆ ಸೇವಿಸುವುದು ಇವರ ರೂಢಿ. ಗುರುವಾರವೂ ಇದೇ ಕ್ರಮದಲ್ಲಿ ಶಿವು, ಹರೀಶ್‌ನ್ನು ಮನೆಗೆ ಕರೆದುಕೊಂಡು ಬಂದಿದ್ದ. ಸೈಡ್ಸ್ ತರಲೆಂದು ಆಚೆ ಹೋದ ಶಿವು, ಮನೆಗೆ ಮರಳುತ್ತಿದ್ದಂತೆ ಕಂಡ ದೃಶ್ಯ ಪಿತ್ತ ನೆತ್ತೆಗೇರಿಸಿತು ಎಂದು ತಿಳಿದು ಬಂದಿದೆ.
ಹರೀಶ್ ತನ್ನ ಪತ್ನಿಯೊಂದಿಗೆ ಸಲುಗೆಯಲ್ಲಿ ತೊಡಗಿರುವುದನ್ನು ಶಿವು ಕಣ್ಣಾರೆ ಕಂಡಿದ್ದ ಎನ್ನಲಾಗಿದೆ. ಕ್ಷಣಾರ್ಧದಲ್ಲೇ ರೋಷ ಮಿತಿಮೀರಿದ್ದು, ಮನೆಯಲ್ಲಿದ್ದ ಮಚ್ಚನ್ನು ಹಿಡಿದು ಹರೀಶ್ ಮೇಲೆಯೇ ದಾಳಿ ನಡೆಸಿದ್ದಾನೆ. ತಲೆಗೆ ತೀವ್ರವಾಗಿ ಬಿದ್ದ ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡು, ಸ್ಥಳೀಯರ ಸಹಕಾರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಕೋಮಾದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಹರೀಶ್ ಮತ್ತು ಶಿವನ ಪತ್ನಿಯ ನಡುವೆ ಹಿಂದಿನಿಂದಲೂ ಅನೈತಿಕ ಸಂಬಂಧವಿದ್ದ ಮಾಹಿತಿ ಲಭ್ಯವಾಗಿದೆ. ಇದೇ ವಿಚಾರಕ್ಕೆ ಕೋಪಗೊಂಡಿದ್ದ ಶಿವು ನಾಯ್ಕ್ ನಡುವೆ, ಬೆಳಿಗ್ಗೆಯೇ ಇವರ ನಡುವೆ ವಾಗ್ವಾದ ನಡೆದ ನಂತರ ಸಂಜೆ ದಾಳಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆರೋಪಿಯಾಗಿರುವ ಶಿವು ಜೆಸಿಬಿ ಆಪರೇಟರ್; ಹರೀಶ್ ಕೂಲಿ ಕಾರ್ಮಿಕ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
