ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಮೊದಲ ಪ್ರಿ-ಕ್ವಾಟರ್ ಫೈನಲ್ ಪಂದ್ಯ: ಅಮಿಗೋಸ್ ಕ್ವಾಟರ್ ಫೈನಲ್ ಗೆ ಲಗ್ಗೆ

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಮೊದಲ ಪ್ರಿ-ಕ್ವಾಟರ್ ಫೈನಲ್ ಪಂದ್ಯದಲ್ಲಿ ಅಮಿಗೋಸ್ ಕಲ್ಲುಬಾಣೆ ತಂಡವು 04-02 ಗೋಲುಗಳ ಅಂತರದಿಂದ ಅಮಿಟಿ ಯುನೈಟೆಡ್ ತಂಡದ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಕ್ವಾಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ.ಅಮಿಗೋಸ್ ತಂಡದ ಪರವಾಗಿ ಚುಪ್ಪಿ ಎರಡು ಹಾಗೂ ನಬೀಲ್,ಆದಿಲ್ ತಲಾ ಒಂದು ಗೋಲು ಗಳಿಸಿದರು.ಅಮಿಟಿ ತಂಡದ ಪರವಾಗಿ ಸಾದಿಕ್ ಹಾಗೂ ಇರ್ಫಾನ್ ತಲಾ ಒಂದುಗೋಲು ದಾಖಲಿಸಿದರು. ಅಮಿಗೋಸ್ ತಂಡದ ಚುಪ್ಪಿ,ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
What's Your Reaction?






